ಮೋದಿ ರೋಡ್ ಶೋನಲ್ಲಿ ಬದಲಾವಣೆ…

62
firstsuddi

ಬೆಂಗಳೂರು: ಟ್ರಾಫಿಕ್ ಮತ್ತು ಮಳೆಯ ಹಿನ್ನೆಲೆಯಲ್ಲಿ ಮೇ 6ರಂದು ನಿಗದಿಯಾಗಿದ್ದ ಮೋದಿ ಬೆಂಗಳೂರು ರೋಡ್ ಶೋನಲ್ಲಿ ಬದಲಾವಣೆ ಮಾಡಲು ಬಿಜೆಪಿ ಮುಂದಾಗಿದೆ.

ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಪ್ರಧಾನಿ ಮೋದಿ ರೋಡ್ ​ಶೋ ನಡೆಸಲಿದ್ದಾರೆ. ಶನಿವಾರ ಸಂಜೆ ನಡೆಯಬೇಕಿದ್ದ ರೋಡ್​ ಶೋ ಭಾನುವಾರಕ್ಕೆ ನಿಗದಿಯಾಗಿದ್ದು, ಸಂಜೆ ಮಳೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ರೋಡ್​ಶೋ ನಡೆಯಲಿದೆ.

ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಯಲಿದೆ.

ಮೋದಿ ಅವರು ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಲ್ಲಿ ಶನಿವಾರ (ಮೇ 6) ಮಾತ್ರವಲ್ಲದೇ ಭಾನುವಾರವೂ (ಮೇ7) ಸಹ ರಾಜಧಾನಿ ಬೆಂಗಳೂರು ನಗರದಲ್ಲಿ ಒಟ್ಟು 36.6 ಕಿ. ಮೀ ದೂರ ಬೃಹತ್ ರೋಡ್ ಶೋ ನಡೆಸಲಿದ್ದಾರೆ.