ಮೌಂಟ್ ಎವರೆಸ್ಟ್ ಇನ್ನು ಮುಂದೆ ಭಾರೀ ದುಬಾರಿ.

23

ಕಠ್ಮಂಡು: ಜಗತ್ತಿನ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಹತ್ತಲು ಬಯಸುತ್ತೀರಾ, ಹಾಗಾದ್ರೆ ಇನ್ನು ಮುಂದೆ ನೀವು ದುಬಾರಿ ಶುಲ್ಕವನ್ನು ಪಾವತಿಸಿ ಪರ್ವತವನ್ನು ಹತ್ತಬೇಕಿದೆ. ನೇಪಾಳ ಸರ್ಕಾರ ಎಂಟು ವರ್ಷದ ನಂತರ ಬೆಲೆಯನ್ನು ಪರಿಷ್ಕರಿಸಿದೆ. ಶೇಕಡ 36ರಷ್ಟು ಶುಲ್ಕವನ್ನು ಏರಿಕೆ ಮಾಡಿ ಚಾರಣಿಗರಿಗೆ ಶಾಕ್ ನೀಡಿದೆ. ವಿದೇಶಿಯರಿಗೆ ಪರ್ವತಾರೋಹಣ ಶುಲ್ಕವನ್ನು ಈ ಮೊದಲು 11 ಸಾವಿರ ಡಾಲರ್, ಅಂದಾಜು 9 ಲಕ್ಷ ರೂಪಾಯಿ ಇತ್ತು. ಈಗ ಈ ಶುಲ್ಕವನ್ನು 15 ಸಾವಿರ ಡಾಲರ್‍ಗೆ ಅಂದರೆ 13 ಲಕ್ಷ ರೂಪಾಯಿ ಅಷ್ಟು ಹೆಚ್ಚಳ ಮಾಡಿದೆ. ನೂತನ ದರವು ಈ ವರ್ಷದ ಸೆ.1 ರಿಂದ ಜಾರಿಗೆ ಬರಲಿದೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ಇದ್ದ 2.37 ಲಕ್ಷ ರೂಪಾಯಿ ಶುಲ್ಕವನ್ನು 3.23 ಲಕ್ಷ ರೂಪಾಯಿ ಅಷ್ಟು ಏರಿಕೆ ಮಾಡಲಾಗಿದೆ. ನೇಪಾಳಿ ಪರ್ವಾತರೋಹಿಗಳಿಗೆ 75 ಸಾವಿರ, ನೇಪಾಳಿ ರೂಪಾಯಿ 545 ಡಾಲರ್ ಇದ್ದರೆ ಈಗ ಶುಲ್ಕವನ್ನು 1.50 ಲಕ್ಷ ನೇಪಾಳಿ ರೂಪಾಯಿಗೆ 1,090 ಡಾಲರ್ ಹೆಚ್ಚಳ ಮಾಡಲಾಗಿದೆ.