ಯಡಿಯೂರಪ್ಪ ಅವರಿಗೆ ಯಾವ ಹಿಂದೂಗಳು ಬೇಡ, ಮುಸ್ಲಿಮರು ಬೇಡ : ಜಮೀರ್ ಅಹ್ಮದ್.

407
firstsuddi

ಬಾಗಲಕೋಟೆ : ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಟೀಕಿಸುವ ವೇಳೆ ವಿವಾಧಾತ್ಮಕ ಹೇಳಿಕೆ ನೀಡಿದ್ದು, ಜಮೀರ್ ಅಹ್ಮದ್ ಅವರು ಮಾತನಾಡಿದ ವೀಡಿಯೋ ಈಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಮುಧೋಳ ಪಟ್ಣಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಅವರು, ಯಾವ ಮುಸ್ಲಿಂ ಜನರು ಯಡಿಯೂರಪ್ಪ ಅವರನ್ನು ನಂಬಬೇಡಿ, ಮುಸ್ಲಿಂ ಮತಗಳನ್ನು ಪಡೆಯುವ ಉದ್ದೇಶದಿಂದ ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಮಾಡಿಕೊಂಡು ಟಿಪ್ಪು ಜಯಂತಿ ಮಾಡಿದ್ದರು. ಅಂದು ಪೇಟಾ ಹಾಕಿಕೊಂಡು ಕೈಯಲ್ಲಿ ಖತ್ತಿ ಹಿಡಿದು ನಿಂತಾಗ ಟಿಪ್ಪು ಬೇಕಾಗಿತ್ತು, ಈಗಾ ಬೇಡವಾ? ಎಂದು ಪ್ರಶ್ನಿಸಿದ್ದು, ಯಡಿಯೂರಪ್ಪ ಅವರಿಗೆ ಯಾವ ಹಿಂದೂಗಳು ಬೇಡ, ಮುಸ್ಲಿಮರು ಬೇಡ. ಅವರಿಗೆ ಕೇವಲ ಅಧಿಕಾರ ಬೇಕಾಗಿದ್ದರಿಂದ ಇಂದಿಗೂ ಅವರು ತೆರೆಮರೆಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದಾರೆ. ನಾವು ರಾಮ ಮಂದಿರ ಕಟ್ಟುವುದು ಬೇಡ ಅಂತ ಎಂದಿಗೂ ಹೇಳಿಲ್ಲ. ಒಂದು ಕಡೆ ಮಸೀದಿ ಇರಲಿ ಇನ್ನೊಂದು ಕಡೆ ದೇವಸ್ಥಾನ ಇರಲಿ ಅದನ್ನು ಯಾರು ವಿರೋಧ ವ್ಯಕ್ತಪಡಿಸಿಲ್ಲ. ಬಿಜೆಪಿ ನಾಯಕರು ಬಾಬರಿ ಮಸೀದಿ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಮಗೆ ನೆಮ್ಮದಿ ಮತ್ತು ಶಾಂತಿ ಬೇಕಿದೆ ಎಂದರು.