ಯುವ ಆಟಗಾರನಿಗೆ ಡಿಕ್ಕಿ ಹೊಡೆದ ಕೊಹ್ಲಿ ಕಿರಿಕ್.

32

ಮೆಲ್ಬರ್ನ್: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಸ್ಯಾಮ್ ಕಾನ್‍ಸ್ಟಸ್ ಇಬ್ಬರ ನಡುವೆ ಕಿತ್ತಾಟ ನಡೆದಿದೆ. ಇಬ್ಬರು ಪರಸ್ಪರ ವಾದ ಮಾಡುತ್ತಿದಂತೆ ಅಂಪೈರ್‍ಗಳು ಮತ್ತು ಇತರ ಆಟಗಾರರು ಮಧ್ಯ ಬಂದು ಜಗಳವನ್ನು ಬಿಡಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವಿನ ಕಿತ್ತಾಟದ ವಿಡಿಯೋ ವೈರಲ್ ಆಗಿದೆ. ಜಸ್ಪ್ರೀತ್ ಬುಮ್ರಾ ಇನಿಂಗ್ಸ್‍ನ 11ನೇ ಓವರ್ ಎಸೆಯುತ್ತಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಕೀಪರ್ ಪಂತ್ ಕಡೆಗೆ ಬಾಲ್ ಹಿಡಿದುಕೊಂಡು ಹೋಗುತ್ತಿರುವಾಗ ಇಂದು ಟೆಸ್ಟ್ ಕ್ಯಾಪ್ ಧರಿಸಿದ ಸ್ಯಾಮ್‍ಗೆ ಭುಜದಿಂದ ಡಿಕ್ಕಿ ಹೊಡೆದಿದ್ದಾರೆ. ತಕ್ಷಣವೇ ಸಿಟ್ಟಾದ ಸ್ಯಾಮ್ ಕೊಹ್ಲಿಯನ್ನು ದಿಟ್ಟಿಸಿ ನೋಡಿದ್ದಾರೆ. ಈ ವೇಳೆ ಕೊಹ್ಲಿ ಸ್ಯಾಮ್ ಜೊತೆ ಜಗಳಕ್ಕೆ ಮುಂದಾಗಿದ್ದಾರೆ. ಕೊನೆಗೆ ಆರಂಭಿಕ ಆಟಗಾರ ಖವಾಜ ಹಾಗೂ ಅಂಪೈರ್‍ಗಳು ಬಂದು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ. ಯಾವುದೇ ಆಟಗಾರ ತನ್ನ ಸಹ ಆಟಗಾರ, ಎದುರಾಳಿ ಆಟಗಾರನ ಸಹಾಯಕ್ಕೆ ಬರುವ ಅಂಪೈರ್, ಸಿಬ್ಬಂದಿ, ಮ್ಯಾಚ್ ರೆಫ್ರಿ ಅಥವಾ ಮೈದಾನದಲ್ಲಿ ಯಾವುದೇ ಇತರೆ ವ್ಯಕ್ತಿಯೊಂದಿಗೆ ಅನಾವಶ್ಯಕವಾಗಿ ವರ್ತನೆ ಮಾಡುವಂತಿಲ್ಲ. ದೈಹಿಕವಾಗಿ ಹಲ್ಲೆ ಅಥವಾ ನಿಂದಿಸಿದರೆ ಶಿಕ್ಷೆ ವಿಧಿಸಬಹುದಾಗಿದೆ. ಮೂಲಗಳ ಪ್ರಕಾರ ಪಂದ್ಯದ 20% ಶುಲ್ಕ ಕಡಿತ ಮಾಡಲಾಗಿದೆ. ಅನಾವಶ್ಯಕ ವರ್ತನೆಗಾಗಿ ಕೊಹ್ಲಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.