ರಾಜ್ಯಕ್ಕೆ ಮೂರನೇ ಅಲೆ ಈಗಾಗಲೇ ಬಂದಿದೆ : ಸಚಿವ ಸುಧಾಕರ್.

61
firstsuddi

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ರೇಟು ಗಮನಿಸಿದರೆ, ಮೂರನೇ ಅಲೆ ಬಂದಿರುವುದು ಖಚಿತವಾಗಿದೆ. ಕೊರೊನಾ ಬರುವುದನ್ನ ತಡೆಯಲು ಆಗುವುದಿಲ್ಲ, ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗುವುದನ್ನ ಕಡಿಮೆ ಮಾಡಲು ಸಾಧ್ಯವಿದೆ. ಆ ಕ್ರಮಗಳ ಬಗ್ಗೆ ಇಂದು ವಿಶೇಷವಾಗಿ ತಜ್ಞರೊಂದಿಗೆ ಸಭೆ ನಡೆಸಲಾಗುವುದು. ಓಮಿಕ್ರಾನ್ ದಿನೇ ದಿನೆ ಹೆಚ್ಚಾಗ್ತಿದ್ದು, ನಿನ್ನೆ ಒಂದೇ ದಿನ ಶೇ.1.06ಕ್ಕೆ ಏರಿಕೆ ಕಂಡಿದೆ. 1290 ಕೇಸ್ ಗಳು ಪತ್ತೆಯಾಗಿದ್ದು, ಇದರಲ್ಲಿ ಬೆಂಗಳೂರಿನಲ್ಲೇ ಹೆಚ್ಚು ಸೋಂಕಿತರು ಇದ್ದಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 15-18 ವರ್ಷದ ಮಕ್ಕಳ ಲಸಿಕೆ ಅಭಿಯಾನದಲ್ಲಿ ನಿನ್ನೆ ರಾಜ್ಯದಲ್ಲಿ 4,22,152 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಶೇ.66 ಲಸಿಕೆ ಅಭಿಯಾನ ಪೂರ್ಣಗೊಂಡಿದ್ದು, ಇನ್ನೂ 10-15 ದಿನಗಳ ಒಳಗೆ ಎಲ್ಲಾ ಮಕ್ಕಳಿಗೆ ಲಸಿಕೆ ಕೊಡುತ್ತೇವೆ. ದೇಶದಲ್ಲಿ ಎಲ್ಲ ಮೆಟ್ರೋಪಾಲಿಟನ್ ಸಿಟಿಗಳಲ್ಲೇ ಸೋಂಕು ಹೆಚ್ಚಳವಾಗ್ತಿದೆ. ಹೀಗಾಗಿ, ಬೆಂಗಳೂರು ಏರ್ ಪೋರ್ಟ್ ಹಾಗೂ ಜನಸಂದಣಿ ಪ್ರದೇಶದಲ್ಲಿ ಇನ್ನಷ್ಟು ನಿಗಾವಹಿಸುವ ಅಗತ್ಯ ಇದೆ. ಇದಕ್ಕಾಗಿ ಮ್ರೈಕೋ ಕಂಟೇನ್ಮೆಂಟ್ ಜೋನ್ ಮಾಡುವುದರ ಕುರಿತು ಇಂದು ಸಂಜೆ ನಡೆಯುವ ಸಿಎಂ ಜೊತೆಗಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಸೋಂಕು ಇಷ್ಟು ವೇಗವಾಗಿ ಹರಡುತ್ತೆ ಅಂತ ಯಾರು ನಿರೀಕ್ಷೆ ಮಾಡಿರಲಿಲ್ಲ. ಕಾಂಗ್ರೆಸ್ ನವರು ಪಾದಯಾತ್ರೆ ಮಾಡಲಿ. ಆದರೆ ಈಗ ಅದಕ್ಕೆ ಸೂಕ್ತ ಸಮಯವಲ್ಲ. ಅಧಿಕಾರ ಇದ್ದಾಗ ಇದೆಲ್ಲ ಮಾಡಲು ಅವರಿಗೆ ನೆನಪು ಆಗಲಿಲ್ಲ, ಈಗ ಚುನಾವಣೆ ಇದೆ ಅಲ್ಲವೇ ಅದಕ್ಕೆ ಇದನ್ನು ಮಾಡ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಎಲ್ಲರನ್ನೂ ಕರೆಸಿ ಇಲ್ಲಿ ಹೋರಾಟಕ್ಕೆ ಮುಂದಾಗ್ತಿದ್ದಾರೆ. ಆದರೆ ಇದರಿಂದ ಕೊರೊನಾ ಹೆಚ್ಚಳ ಆದರೆ, ಅವರೇ ಅದರ ಜವಾಬ್ದಾರಿ ಹೊರ ಬೇಕು. ಸರ್ಕಾರದ ನಿಯಮವನ್ನು ಎಲ್ಲರೂ ಪಾಲನೆ ಮಾಡಬೇಕು. ಅದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು ಎಂದರು.