ರಾಜ್ಯಾದ್ಯಂತ ಇಂದಿನಿಂದ ಶಾಲಾ – ಕಾಲೇಜು ಆರಂಭ…

86
firstsuddi

ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ ಶಾಲಾ-ಕಾಲೇಜು ಆರಂಭವಾಗ್ತಿದೆ. ಮೊದಲ ಹಂತವಾಗಿ 9-12 ನೇ ತರಗತಿವರೆಗೆ ಇಂದಿನಿಂದ ಭೌತಿಕ ತರಗತಿಗಳು ಪ್ರಾರಂಭವಾಗ್ತಿದೆ. ಈಗಾಗಲೇ ರಾಜ್ಯಾದ್ಯಂತ ಶಾಲೆಗಳಲ್ಲಿನ ಬೋಧನಾ ಕೊಠಡಿ, ಪ್ರಯೋಗಾಲಯಗಳು ಇನ್ನಿತರ ಸ್ಥಳಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.

ಕೋವಿಡ್ ಸೋಂಕು ಪ್ರಸರಣ ಪ್ರಮಾಣ ಶೇ 2ಕ್ಕಿಂತ ಹೆಚ್ಚಿಗೆ ಇರುವ ಜಿಲ್ಲೆಗಳಾದ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಹಾಸನ ಹಾಗು ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲೂ 9-12ನೇ ತರಗತಿಗಳು ಆರಂಭವಾಗಲಿದೆ. ವಿದ್ಯಾರ್ಥಿಗಳು ಶಾಲಾವಧಿಯಲ್ಲಿ ಹಳೆಯ ಸ್ಮಾರ್ಟ್ ಕಾರ್ಡ್ ಪಾಸ್ನಲ್ಲೇ ಸಂಚರಿಸಬಹುದು. ಪಾಸ್ ಇಲ್ಲದೇ ಇರುವವರು, ಶಾಲಾ-ಕಾಲೇಜಿನ ಐಡಿ ಕಾರ್ಡ್ ಅಥವಾ ಶುಲ್ಕದ ರಸೀದಿ ತೋರಿಸಿ ಓಡಾಡಬಹುದಾಗಿದೆ.

ಶಾಲೆ ಆರಂಭಕ್ಕೆ ಮಾರ್ಗಸೂಚಿ ಇಂತಿದೆ :
• ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಇಲ್ಲ. ಆನ್ ಲೈನ್ ಹಾಗೂ ಆಫ್ ಲೈನ್ ತರಗತಿಗೆ ಅವಕಾಶ
• 9 ಮತ್ತು 10ನೇ ತರಗತಿಗಳಿಗೆ ಆರಂಭದಲ್ಲಿ ಅರ್ಧ ದಿನ ಭೌತಿಕ ತರಗತಿ. ( ಸೋಮವಾರದಿಂದ -ಶುಕ್ರವಾರದವರೆಗೆ ಬೆಳಗ್ಗೆ.10ರಿಂದ ಮಧ್ಯಾಹ್ನ.1.30ರವರೆಗೂ, ಶನಿವಾರ ಮ. 12.30ರವರೆಗೆ ಕ್ಲಾಸ್)
• ಮಕ್ಕಳು ಪೋಷಕರಿಂದ ಅನುಮತಿ ಪತ್ರ ತರುವುದು ಕಡ್ಡಾಯ.
• ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶ
• ಶಾಲೆಗಳು ಇಡೀ ಆವರಣವನ್ನು ಸ್ಯಾನಿಟೈಸ್ ಮಾಡಬೇಕು, ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು
• ಶೌಚಾಲಯ, ಶಾಲೆಯ ಕೊಠಡಿ, ಅಡುಗೆ ದಾಸ್ತಾನು ಎಲ್ಲವನ್ನೂ ಸ್ವಚ್ಛಗೊಳಿಸಬೇಕು.
• ಕೊರೊನಾ ಲಕ್ಷಣ ಕಂಡುಬರುವ ಮಗುವಿಗೆ ಶಾಲೆಯ ಪ್ರವೇಶ ಇರುವುದಿಲ್ಲ
• 50 ವರ್ಷ ಮೇಲ್ಪಟ್ಟ ಶಿಕ್ಷಕರು ಮಾಸ್ಕ್, ಜೊತೆಗೆ ಫೇಸ್ ಶೀಲ್ಡ್ ಧರಿಸಬೇಕು. ಶಿಕ್ಷಕರು ಕನಿಷ್ಠ 1 ಡೋಸ್ ಆದರೂ ಪಡೆದಿರಲೇಬೇಕು. ಸೋಂಕು ಲಕ್ಷಣ ಇದ್ದಲ್ಲಿ ರಜೆ ಪಡೆಯಬೇಕು.