ರಾಷ್ಟ್ರೀಯ ಕೌಂಟರ್ ಸ್ಫೋಟಕ ಸಾಧನ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕ ಪೊಲೀಸ್ ತಂಡ.

30

ಬೆಂಗಳೂರು: ರಾಷ್ಟ್ರೀಯ ಕೌಂಟರ್ ಇಂಪ್ರೊವೈಸ್ಡ್ ಎಕ್ಸ್ ಪ್ಲೋಸಿವ್ ಡಿವೈಸ್ ಸ್ಪರ್ಧೆಯಲ್ಲಿ ಕರ್ನಾಟಕ ಪೊಲೀಸರು ಪ್ರಥಮ ಬಾರಿಗೆ ಪ್ರಶಸ್ತಿ ಗೆದ್ದಿದ್ದಾರೆ. ಆಂತರಿಕ ಭದ್ರತಾ ವಿಭಾಗ ಸೆಂಟರ್ ಫಾರ್ ಕೌಂಟರ್ ಟೆರರಿಸಂನ ಸಿಐಇಡಿ ಪ್ರತಿಷ್ಠಿತ ರಾಷ್ಟ್ರೀಯ ಜಂಟಿ ಕೌಂಟರ್ ಸ್ಪರ್ಧೆಯನ್ನು ಗೆದ್ದಿದ್ದು, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮನೇಸರ್ ದೆಹಲಿ ಸ್ಪರ್ಧೆ ಆಯೋಜಿಸಿದೆ. ಕರ್ನಾಟಕ ರಾಜ್ಯ ಪೊಲೀಸ್ ISD ಕೌಂಟರ್ IED ತಂಡವು ರಾಷ್ಟ್ರೀಯ ಜಂಟಿ ಕೌಂಟರ್ IED ಸ್ಪರ್ಧೆಯನ್ನು ಗೆದ್ದಿದೆ. ಐಎಸ್ ಡಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತರಬೇತಿ ಪಡೆದ ರಾಜ್ಯ ಪೊಲೀಸರ ವಿಶೇಷ ವಿಭಾಗವಾಗಿದೆ. ಇದನ್ನು ನವೆಂಬರ್ 26, 2008 ರಂದು ಮುಂಬೈ ಭಯೋತ್ಪಾದಕ ದಾಳಿಯ ನಂತರ 2011 ರಲ್ಲಿ ಸ್ಥಾಪಿಸಲಾಯಿತು. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಸಿಬ್ಬಂದಿ ಜೊತೆ ಮಾತನಾಡಿದ ಸಿಐಇಡಿ ತಂಡಕ್ಕೆ ತರಬೇತಿ ನೀಡುತ್ತಿರುವ ಕರ್ನಲ್ ಅಕ್ಕುಲಾ ಬಾಲಕೃಷ್ಣ, ಎಲ್ಲಾ ಅರೆಸೇನಾ ಪಡೆಗಳು, ರಾಜ್ಯ ವಿಶೇಷ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆವ ಮನೇಸರ್‍ನಲ್ಲಿ ನವೆಂಬರ್ 11 ರಿಂದ 16 ರವರೆಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು. 18 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳು ಮತ್ತು ಐದು ಸಿಎಪಿಎಫ್‍ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಎಂದು ಸಿಸಿಟಿ, ಐಎಸ್‍ಡಿಗೆ ನಿಯೋಜನೆಯಲ್ಲಿರುವ ಸೇವೆಯಲ್ಲಿರುವ ಸೇನಾ ಅಧಿಕಾರಿ, ಯಾವುದೇ ಭಯೋತ್ಪಾದಕ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಪೊಲೀಸ್ ವಿಶೇಷ ಪಡೆಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ ಎಂದು ಹೇಳಿದರು.