ಬೆಂಗಳೂರು : ರೈಲು ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಸಿಹಿಸುದ್ದಿ ನೀಡಿದ್ದು, ವಿಶೇಷ ದರ ಕಡಿತಗೊಳಿಸಿದೆ.
ಕೊರೊನಾ ಕಾಲದಲ್ಲಿ ಸಾಮಾನ್ಯ ಟಿಕೆಟ್ ದರಕ್ಕಿಂತ ಶೇ.30 ರಷ್ಟು ಬೆಲೆ ಹೆಚ್ಚಿಸಲಾಗಿತ್ತು. ಇದರಿಂದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗೆ ಮೊರೆ ಹೋಗಿದ್ದರು. ಇದೀಗ ರೈಲ್ವೇ ಇಲಾಖೆ ರೈಲುಗಳಿಗೆ ನೀಡಲಾಗಿದ್ದ ವಿಶೇಷ ದರ್ಜೆಯನ್ನು ಹಿಂಪಡೆದು ಮೊದಲಿನ ದರ ನಿಗದಿ ಮಾಡಲು ಸೂಚನೆ ನೀಡಿದ್ದು, ರೈಲುಗಳ ವಿಶೇಷ ದರ ಕಡಿಗೊಳಿಸುವಂತೆ ರೈಲ್ವೇ ಮಂಡಳಿ ನವೆಂಬರ್ 12 ರಂದು ದೇಶದ ಎಲ್ಲ ರೈಲ್ವೇ ವಿಭಾಗಗಳಿಗೆ ಸುತ್ತೋಲೆ ಹೊರಡಿಸಿದೆ. ನವೆಂಬರ್ 18 ರಿಂದ ಹಳೆ ದರ ಜಾರಿಗೆ ಬರಲಿದೆ.










