ಲಂಡನ್​​ನಲ್ಲಿ ಪತ್ನಿ ಅಕ್ಷತಾ ಜೊತೆ ಗೋ ಪೂಜೆ ಮಾಡಿದ ರಿಷಿ ಸುನಾಕ್.

54
firstsuddi

ಲಂಡನ್ : ಬ್ರಿಟನ್ ಪ್ರಧಾನಮಂತ್ರಿ ಹುದ್ದೆಯ ಪ್ರಬಲ ಸ್ಪರ್ಧಿ ರಿಷಿ ಸುನಕ್ ರಿಷಿ ಸುನಕ್ ಅವರು, ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಲಂಡನ್ ನಲ್ಲಿ ಗೋಪೂಜೆ ಮಾಡಿದ್ದಾರೆ. ಈ ವೀಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬ್ರಿಟನ್ ನಲ್ಲಿರುವ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ತಿಂಗಳು ಶ್ರೀಕೃಷ್ಣನ ಜನ್ಮಾಷ್ಟಮಿ ಅಂಗವಾಗಿ ಪತ್ನಿ ಅಕ್ಷತಾ ಅವರೊಂದಿಗೆ ಭಕ್ತಿವೇದಾಂತ್ ಮೇನರ್ ದೇವಾಲಯಕ್ಕೆ ಭೇಟಿ ನೀಡಿದ್ದ ಅವರು, ಪೂಜೆಯಲ್ಲಿ ಭಾಗಿಯಾಗಿದ್ದರು.

ಭಾರತೀಯ ಸಾಫ್ಟ್ ವೇರ್ ಉದ್ಯಮಿ ಎನ್ ಆರ್ ನಾರಾಯಣ ಮೂರ್ತಿ ಅವರ ಪುತ್ರಿಯನ್ನು ವರಿಸಿರುವ ಸುನಕ್ ಬ್ರಿಟನ್ ಪ್ರಧಾನಿ ಆಕಾಂಕ್ಷಿಯಾಗಿದ್ದು, ಅಂತಿಮ ರೇಸ್ ನಲ್ಲಿದ್ದಾರೆ. ಕೊನೆಯ ಸುತ್ತಿನಲ್ಲಿ ರಿಷಿ ಅವರಿಗೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಪ್ರತಿ ಸ್ಪರ್ಧಿಯಾಗಿದ್ದಾರೆ.