ವಂದೇ ಭಾರತ್ ರೈಲಿಗೆ ಕಲ್ಲೇಟು- ಇಬ್ಬರು ಮಕ್ಕಳು ಪೊಲೀಸ್ ವಶಕ್ಕೆ…

65
firstsuddi

ದಾವಣಗೆರೆ: ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಕ್ಕಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ಶನಿವಾರ(ಜುಲೈ 01) ಮಧ್ಯಾಹ್ನ 3-30ಕ್ಕೆ ವಂದೇ ಭಾರತ್ ರೈಲು ಧಾರವಾಡದಿಂದ ದಾವಣಗೆರೆಗೆ ಆಗಮಿಸುತ್ತಿದ್ದ ಸಂದರ್ಭ ಇಬ್ಬರು ಮಕ್ಕಳು ರೈಲಿಗೆ ಕಲ್ಲು ಹೊಡೆದಿದ್ದು, ಕಲ್ಲಿನ ಹೊಡೆತಕ್ಕೆ ರೈಲಿನ ಕಿಟಕಿ ಗಾಜು ಬಿರುಕು ಬಿಟ್ಟಿತ್ತು. ಈ ಹಿನ್ನೆಲೆ ಇಬ್ಬರು ಮಕ್ಕಳನ್ನು ಆರ್‌ಪಿಎಫ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ದಾವಣಗೆರೆಯ ಎಸ್ಎಸ್ ನಗರ, ಹಾಗೂ ಭಾಷಾ ನಗರದ 12 ವರ್ಷದ ಇಬ್ಬರು ಮಕ್ಕಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಸದ್ಯ ಇಬ್ಬರು ಮಕ್ಕಳನ್ನು ಚಿತ್ರದುರ್ಗದ ಬಾಲಮಂದಿರದಲ್ಲಿ ಇರಿಸಲಾಗಿದೆ.