ವಾಪಸ್ ಬರದಿದ್ದಕ್ಕೆ ತವರು ಸೇರಿದ ಪತ್ನಿ ಮೇಲೆ ಪತಿ ಫೈರಿಂಗ್…

70
firstsuddi

ಅಥಣಿ(ಬೆಳಗಾವಿ): ತವರು ಸೇರಿದ ಪತ್ನಿ ವಾಪಸ್ ಮನೆಗೆ ಬರದಿದ್ದಕ್ಕೆ ಪತಿಯೇ ರಿವಾಲ್ವರ್ ನಿಂದ ಫೈರಿಂಗ್ ಮಾಡಿರುವ ಘಟನೆ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ಶಿವಾನಂದ್ ಹೆಂಡತಿಯ ಮೇಲೆ ಫೈರಿಂಗ್ ಮಾಡಿದ ಭೂಪ. ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಶಿವಾನಂದ್ ಪತ್ನಿ ಜೀವ ಉಳಿಸಿಕೊಂಡಿದ್ದಾರೆ. ಶಿವಾನಂದ್ ಮೂಲತಃ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ನಿವಾಸಿ. ಗಂಡನ ಅನೈತಿಕ ಸಂಬಂಧದಿಂದ ಬೇಸತ್ತ ಪ್ರೀತಿ ಅಥಣಿಯ ತವರು ಮನೆ ಸೇರಿದ್ದರು.

ನೀನು ಮನೆಗೆ ಬರಲೇಬೇಕು ಅಂತ ಶಿವಾನಂದ್ ಪರವಾನಿಗೆ ಪಡೆದ ಗನ್ ತೋರಿಸಿ ಬೆದರಿಸಿದ್ದಾನೆ. ಪತ್ನಿ ವಾಪಸ್ ಬರಲು ಒಪ್ಪದಿದ್ದಾಗ ಕೋಪಗೊಂಡ ಶಿವಾನಂದ್ ಹೆಂಡತಿ ಮೇಲೆ ಎರಡು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಷಾತ್ ಪ್ರೀತಿ ಬದುಕುಳಿದಿದ್ದಾರೆ.

ಮನೆಗೆ ಬರಲಿಲ್ಲವೆಂದರೆ ಎರಡು ಗುಂಡು ನಿನಗೆ ಹಾರಿಸಿ ಎರಡು ಗುಂಡು ನಾನು ಹಾರಿಸಿಕೊಳ್ತೀನಿ ಅಂತ ಧಮ್ಕಿ ಹಾಕಿದ್ದ. ಘಟನೆ ಬಳಿಕ ಪ್ರೀತಿ ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನನ್ವಯ ಪೊಲೀಸರು ಶಿವಾನಂದ್ ನನ್ನು ಬಂಧಿಸಿದ್ದಾರೆ.