ಕಲಬುರಗಿ: ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕವಾಗಿ ಸಹಕರಿಸುವಂತೆ ಕೇಳಿಕೊಂಡಿರುವ ಗುಲಬರ್ಗಾ ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕನ ಆಡಿಯೋ ವೈರಲ್ ಆಗಿದೆ.
ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕ, ವಿದ್ಯಾರ್ಥಿನಿಗೆ ಕರೆ ಮಾಡಿ ಮಂಚಕ್ಕೆ ಕರೆದಿರುವುದು ಆಡಿಯೋದಲ್ಲಿದೆ. ಈ ಆಡಿಯೋ ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕನದ್ದು ಮತ್ತು ವಿದ್ಯಾರ್ಥಿನಿಯೂ ಕೂಡ ಅದೇ ವಿಭಾಗಕ್ಕೆ ಸೇರಿದ್ದಾಳೆ ಎನ್ನಲಾಗಿದ್ದು, ಅತಿಥಿ ಉಪನ್ಯಾಸಕ ವಿದ್ಯಾರ್ಥಿನಿ ಜೊತೆ ಒಟ್ಟು 23 ನಿಮಿಷ ಮಾತನಾಡಿರುವ ಈ ಆಡಿಯೋ ವಿಶ್ವವಿದ್ಯಾಯಲದ ಕ್ಯಾಂಪಸ್‌ನಲ್ಲಿ ಕಂಪನ ಸೃಷ್ಟಿಸಿದೆ.
ಆಡಿಯೋದಲ್ಲಿ, ಆರೋಪಿಯು ವಿದ್ಯಾರ್ಥಿನಿಯನ್ನು ತನ್ನ ಗರ್ಲ್‌ಫ್ರೆಂಡ್ ಆಗುವಂತೆ ಮತ್ತು ಅವಳು ತನ್ನೆಲ್ಲಾ ಆಸೆಗಳನ್ನು ಪೂರೈಸುವಂತೆ ಕೇಳಿಕೊಂಡಿದ್ದಾನೆ ಮತ್ತು ಒತ್ತಾಯಿಸಿದ್ದಾನೆ. ವಿದ್ಯಾರ್ಥಿನಿ ಇದನ್ನು ನಿರಾಕರಿಸುತ್ತಿದ್ದರೂ, ಆರೋಪಿಯು ಆಕೆಯನ್ನು ಪೀಡಿಸುತ್ತಿರುವುದು ಕೇಳಿಬಂದಿದೆ.
ಆರು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಗುಲಬರ್ಗಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ.










