ವಿಧಾನ ಪರಿಷತ್ ಚುನಾವಣೆ ಫಲಿತಾಂಶ : ಯಾರಿಗೆ ಯಾವ ಕ್ಷೇತ್ರದಲ್ಲಿ ಗೆಲುವು?

83
firstsuddi

ಬೆಂಗಳೂರು : ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ವಿಧಾನ ಪರಿಷತ್ನ 25 ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, 25 ಸ್ಥಾನಗಳ ಪೈಕಿ ಬಿಜೆಪಿ 12, ಕಾಂಗ್ರೆಸ್ 11, ಜೆಡಿಎಸ್ 1 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಗೆದ್ದ ಕ್ಷೇತ್ರಗಳು : ಕೊಡಗು-ಸುಜಾ ಕುಶಾಲಪ್ಪ, ಬೆಂಗಳೂರು-ಗೋಪಿನಾಥ್ ರೆಡ್ಡಿ, ಚಿತ್ರದುರ್ಗ- ಕೆ.ಎಸ್. ನವೀನ್, ಬಳ್ಳಾರಿ -ವೈ.ಎಂ.ಸತೀಶ, ಉತ್ತರ ಕನ್ನಡ-ಗಣಪತಿ ಉಳ್ವೇಕರ್, ಚಿಕ್ಕಮಗಳೂರು- ಎಂ.ಕೆ.ಪ್ರಾಣೇಶ್, ಶಿವಮೊಗ್ಗ -ಡಿ.ಎಸ್.ಅರುಣ್, ಕಲಬುರ್ಗಿ – ಬಿ.ಜಿ.ಪಾಟೀಲ್, ಧಾರವಾಡ (ದ್ವಿಸದಸ್ಯ) – ಪ್ರದೀಪ್ ಶೆಟ್ಟರ್,  ದಕ್ಷಿಣ ಕನ್ನಡ (ದ್ವಿಸದಸ್ಯ) – ಕೋಟ ಶ್ರೀನಿವಾಸ್ ಪೂಜಾರಿ.

ಕಾಂಗ್ರೆಸ್ ಗೆದ್ದ ಕ್ಷೇತ್ರಗಳು : ಬೀದರ್- ಭೀಮಾರಾಮ್ ಪಾಟೀಲ್, ರಾಯಚೂರು- ಶರಣಗೌಡ ಬಯ್ಯಾಪುರ,ಮಂಡ್ಯ –ಗೂಳೀಗೌಡ, ತುಮಕೂರು-ಆರ್.ರಾಜೇಂದ್ರ, ಬೆಂಗಳೂರು ಗ್ರಾಮಾಂತರ – ಎಂ.ಎಸ್.ರವಿ, ದಕ್ಷಿಣ ಕನ್ನಡ (ದ್ವಿಸದಸ್ಯ)-ಮಂಜುನಾಥ್ ಭಂಡಾರಿ, ಧಾರವಾಡ (ದ್ವಿಸದಸ್ಯ)-ಸಲ್ಲೀಂ ಅಹಮ್ಮದ್,ಮೈಸೂರು (ದ್ವಿಸದಸ್ಯ)-ಡಿ.ತಿಮ್ಮಯ್ಯ, ಬೆಳಗಾವಿ (ದ್ವಿಸದಸ್ಯ)-ಚನ್ನರಾಜ ಹಟ್ಟಿಹೊಳಿ, ವಿಜಯಪುರ (ದ್ವಿಸದಸ್ಯ) -ಸುನೀಲ್‍ಗೌಡ ಪಾಟೀಲ

ಪಕ್ಷೇತರರು ಗೆದ್ದ ಕ್ಷೇತ್ರ
ಬೆಳಗಾವಿ (ದ್ವಿಸದಸ್ಯ) – ಲಖನ್ ಜಾರಕಿಹೊಳಿ

ಜೆಡಿಎಸ್ ಗೆದ್ದ ಕ್ಷೇತ್ರ
ಹಾಸನ- ಸೂರಜ್ ರೇವಣ್ಣ