ತ್ರಿಶೂರ್: ಎಂಟು ವರ್ಷದ ಬಾಲಕಿಯೊಬ್ಬಳು ವೀಡಿಯೋ ಗೇಮ್ ಆಡುತ್ತಿದ್ದ ವೇಳೆ ಮೊಬೈಲ್ ಸ್ಫೋಟಗೊಂಡು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಿರುವಿಲ್ವಾಮಲದಲ್ಲಿ ನಿನ್ನೆ ರಾತ್ರಿ 10.30ರ ಸುಮಾರಿಗೆ ನಡೆದಿದೆ.
ತಿರುವಿಲ್ವಾಮಲ ನಿವಾಸಿ ಆದಿತ್ಯಶ್ರೀ ಸಮೀಪದ ಶಾಲೆಯೊಂದರಲ್ಲಿ ಮೂರನೇ ತರಗತಿ ಓದುತ್ತಿದ್ದಳು. ಸುದೀರ್ಘ ಕಾಲ ಆಟ ಆಡುವಾಗ ಫೋನ್ ಬಿಸಿಯಾಗಿದ್ದರಿಂದ ಏಕಾಏಕಿ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.










