ವೃದ್ಧೆ ರೋಗಿಗೆ ಲೈಂಗಿಕ ಕಿರುಕುಳ – ಪುರುಷ ನರ್ಸ್ ಬಂಧನ…

76
firstsuddi

ಮೂಡುಬಿದಿರೆ : ವಯೋವೃದ್ಧೆ ರೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಪುರುಷ ಹೋಮ್ ನರ್ಸ್‌ನನ್ನು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಬಂಧಿತ ಪುರುಷ ನರ್ಸ್ ನನ್ನು ಗದಗ ಮೂಲದ 19 ವರ್ಷದ ಶಿವಾನಂದ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಆರೋಪಿಯನ್ನು ಕೊಡಂಗಲ್ಲು ಬಳಿಯ ಹುಡ್ಕೋ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಅನಾರೋಗ್ಯದ ವೃದ್ಧೆಯನ್ನು ನೋಡಿಕೊಳ್ಳಲು ನೇಮಿಸಲಾಗಿತ್ತು. ಆದರೆ ವೃದ್ಧೆ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು ಮತ್ತು ಖಿನ್ನತೆಗೆ ಒಳಗಾಗಿದ್ದರು. ಮನೆಯವರಿಗೆ ಸಂಶಯ ಬಂದು ಆರೋಪಿ ಪುರುಷ ನರ್ಸ್‌ಗೆ ಗೊತ್ತಾಗದಂತೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ.

ನರ್ಸ್ ವೃದ್ಧೆಯನ್ನು ಅಸ್ವಾಭಾವಿಕ ಲೈಂಗಿಕತೆಗೆ ಬಲವಂತ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಈ ಸಂಬಂಧ ಮೂಡುಬಿದಿರೆ ಪೊಲೀಸರಿಗೆ ಕುಟುಂಬದವರು ದೂರು ನೀಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.