ಮಡಿಕೇರಿ : ಆಸ್ಪತ್ರೆಯ ಶವಾಗಾರದಲ್ಲಿ ಮಹಿಳೆಯರ ಜೊತೆ ಕಾಮದಾಟ ಹಾಗೂ ಮೃತಪಟ್ಟ ಮಹಿಳೆಯರ ನಗ್ನ ಫೋಟೋ ತೆಗೆದು ವಿಕೃತಿ ಮೆರೆಯುತ್ತಿದ್ದ ವ್ಯಕ್ತಿಯೋರ್ವನನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸೈಯದ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಸೈಯದ್ ಕಳೆದ ಸೆಪ್ಟೆಂಬರ್ 22 ರಂದು ರಾತ್ರಿ ಮಡಿಕೇರಿಯಲ್ಲಿ ಮಹಿಳೆಯ ಮನೆಗೆ ನುಗ್ಗಿ ಮಾನ ಭಂಗಕ್ಕೆ ಯತ್ನಿಸಿದ್ದ. ಈ ಸಂದರ್ಭದಲ್ಲಿ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದು, ಪಕ್ಕದ ಮನೆಯವರು ಹೊರಬರುವಷ್ಟರಲ್ಲಿ ಸೈಯದ್ ಪರಾರಿಯಾಗಿದ್ದಾನೆ. ಈ ಸಂದರ್ಭ ಆತನ ಮೊಬೈಲ್ ಮನೆಯಲ್ಲೇ ಬಿದ್ದಿದ್ದು, ಆತನ ಫೋನ್ ಪರಿಶೀಲಿಸಿದಾಗ ಸಾಕಷ್ಟು ಹೆಣ್ಣು ಮಕ್ಕಳು, ಮಹಿಳೆಯರನ್ನು ಸಯ್ಯದ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎನ್ನುವುದು ಗೊತ್ತಾಗಿದೆ.
ಅಷ್ಟೇ ಅಲ್ಲದೇ ಯಾರಾದರೂ ಮಹಿಳೆಯರು, ಹೆಣ್ಣುಮಕ್ಕಳು ಸತ್ತು ಅವರ ಮೃತದೇಹಗಳನ್ನು ಶವಾಗಾರಕ್ಕೆ ಹಾಕಿದರೆ, ಪೋಸ್ಟ್ ಮಾರ್ಟಂಗೂ ಮೊದಲೇ ಈ ಕಿರಾತಕ ಆ ಸತ್ತ ಮಹಿಳೆಯರ, ಹೆಣ್ಣುಮಕ್ಕಳ ಬೆತ್ತಲೇ ಮೃತದೇಹಗಳ ಫೋಟೋಗಳನ್ನು ತನ್ನ ಮೊಬೈಲ್ ನಲ್ಲಿ ತೆಗೆದುದಿಟ್ಟುಕೊಳ್ಳುತ್ತಿದ್ದ ಎನ್ನುವ ಘೋರ ವಿಷಯವೂ ಗೊತ್ತಾಗಿದೆ. ಈ ಬಗ್ಗೆ ಸಂತ್ರಸ್ತರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಪ್ರಕರಣ ಸಂಬಂಧ ಆರೋಪಿ ಸೈಯದ್ ನನ್ನು ಪೊಲೀಸರು ಬಂಧಿಸಿದ್ದಾರೆ.










