ಶಿವಮೊಗ್ಗ : ಕಚ್ಛಾ ನಾಡಾ ಬಾಂಬ್ ಸ್ಪೋಟಗೊಂಡು ಐವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕುಂಚೇನಹಳ್ಳಿಯಲ್ಲಿ ನಡೆದಿದೆ. ಕುಂಚೇನಹಳ್ಳಿಯ ತಮಿಳ್ ಕುಮಾರ್ ಎಂಬಾತನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಡಾ ಬಾಂಬ್‌ಗಳನ್ನು ಬಿಸಿಲಿಗೆ ಒಣಗಿಸುವುದಕ್ಕಾಗಿ ತಮಿಳ್ ಕುಮಾರ್ ತನ್ನ ಮನೆಯ ಛಾವಣಿಯ ಮೇಲೆ ಇಟ್ಟಿದ್ದರು. ಅವುಗಳಲ್ಲಿ ಕೆಲವು ಉರುಳಿ ಕೆಳಗೆ ಬಿದ್ದಿದ್ದು, ಈ ವೇಳೆ ಸ್ಪೋಟಗೊಂಡಿವೆ. ಇವರೊಂದಿಗೆ ಇನ್ನು ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ನಾಡಬಾಂಬ್ ಗಳನ್ನು ಕಾಡು ಹಂದಿಯನ್ನು ಓಡಿಸುವುದಕ್ಕೆ ಬಳಸಲೆಂದು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದ್ದು, ಈ ಕುರಿತು ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.