ಚಿಕ್ಕಮಗಳೂರು : ಅದ್ವೈತ ಪ್ರತಿಪಾದಕ ಜಗದ್ಗುರು ಶ್ರೀ ಶಂಕರಚಾರ್ಯರು ಮತ್ತು ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಶೃಂಗೇರಿ ಶಂಕರಮಠ ಹಾಗೂ ಬ್ರಾಹ್ಮಣ ಮಹಾಸಭಾದಿಂದ ಗುರುವಾರ ನಗರದಲ್ಲಿ ಅದ್ದೂರಿಯಾಗಿ ಅಚರಿಸಲಾಯಿತು.
ಜಯಂತಿ ಪ್ರಯುಕ್ತ ಬೆಳಿಗ್ಗೆ ಶಂಕರಮಠದಲ್ಲಿ ಭಗತ್ಪಾದರ ವಿಗ್ರಹಕ್ಕೆ ರುದ್ರಾಭಿಷೇಕ ವಿಶೇಷಪೂಜೆ ಅಲಂಕಾರ, ಶಾರದಾ ಮೂಲಮಂತ್ರ ಹೋಮ ನಡೆಯಿತು.ಇದೇ ವೇಳೆ ಭಕ್ತರಿಂದ ಸಾಮೂಹಿಕ ರುದ್ರಪಠಣ ಜರುಗಿತು.
ಸಾರ್ವಜನಿಕ ಅನ್ನಸಂತರ್ಪಣೆ, ಪ್ರಾಕಾರೋತ್ಸವ ನಡೆಸಲಾಯಿತು. ಇದೇ ವೇಳೆ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಧಾರ್ಮಿಕ ವಿಧಿ ವಿಧಾನಗಳ ನಡುವೆ ಏಳು ವಟುಗಳಿಗೆ ಉಪನಯನ ನಡೆಯಿತು.
ಗಾಯತ್ರಿ ಮಹಿಳಾ ಮಂಡಳಿಯಿಂದ ವಿವಿಧ ಸ್ಪರ್ದೆಗಳು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪುರೊಹಿತರಾದ ರಾಮಚಂದ್ರ ಭಟ್ಟರು, ಭೀಮಾಚಾರ್, ಶ್ರೀನಿವಾಸ ಭಟ್ಟರು ಮತ್ತು ಕೂದುವಳ್ಳಿ ರಾಮಚಂದ್ರ ಭಟ್ ಅವರನ್ನು ಮಹಾಸಭಾ ವತಿಯಿಂದ ಸನ್ಮಾನಿಸಲಾಯಿತು.
ಬ್ರಾಹ್ಮಣ ಮಹಾಸಭಾ ಖಜಾಂಚಿ ಹೆಚ್.ಅರ್.ಮೋಹನ್ ಮಾತನಾಡಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಅದ್ವೈತ ವಾಚಸ್ಪತಿ ಡಾ. ಪಾವಗಡ ಪ್ರಕಾಶ್ ರಾವ್, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥ ಜೋಶಿ, ಸದಸ್ಯ ಸತೀಶ್,ರಾಮಚಂದ್ರ ಭಟ್, ಸೀತಾರಾಮಶಾಸ್ತ್ರೀ, ಲಕ್ಷ್ಮೀ ನಾರಾಯಣ ಭಟ್, ಹಾಜರಿದ್ದರು.
Home ಸ್ಥಳಿಯ ಸುದ್ದಿ ಶೃಂಗೇರಿ ಶಂಕರಮಠ ಹಾಗೂ ಬ್ರಾಹ್ಮಣ ಮಹಾಸಭಾದಿಂದ ಶ್ರೀ ಶಂಕರಚಾರ್ಯರು ಮತ್ತು ಶ್ರೀ ರಾಮಾನುಜಾಚಾರ್ಯರ ಜಯಂತಿ ಆಚರಣೆ…