ಚಿಕ್ಕಮಗಳೂರು: ವಿಶ್ವಾಚಾರ್ಯ, ವೀರಸನ್ಯಾಸಿ ಸ್ವಾಮಿ ವಿವೇಕಾನಂದರ 163 ನೇ ಜನ್ಮದಿನಾಚರಣೆ ಇಲ್ಲಿನ ಆದಿಶಕ್ತಿ ನಗರದ ಶ್ರೀ ಶಾರದ ಮಠದಲ್ಲಿ ಜನವರಿ 21 ರಂದು ನಡೆಯಲಿದೆ. ಯುಗಾಚಾರ್ಯನ ಜನ್ಮದಿನ ಅಂಗವಾಗಿ ಮಠದಲ್ಲಿ ಅಂದು ಬೆಳಗ್ಗೆ 5 ಗಂಟೆಗೆ ಮಂಗಳಾರತಿ, ಉಷಾಕೀರ್ತನೆ, ವಿಶೇಷ ಪೂಜೆ, ಶಿವಮಹಿಮಾಸ್ತೋತ್ರ ಪಠಣ, ಹೋಮ ಹವನ ಭಕ್ತರಿಂದ ಭಜನೆ, ಪ್ರವಚನ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಪ್ರಸಾದವಿನಿಯೋಗ, ಸಂಜೆ 6.30 ಕ್ಕೆ ಆರತಿ ಭಜನೆ ನೆರವೇರಲಿದೆ ಎಂದು ಶ್ರೀ ಮಠದ ಅಧ್ಯಕ್ಷೆ ಪ್ರವ್ರಾಜಿಕ ಪ್ರಾಣಾ ಮಾತಾಜಿ ತಿಳಿಸಿದ್ದಾರೆ.










