ದಾವಣಗೆರೆ : ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲು ಬಂದ ಸಚಿವ ಡಾ,ಕೆ ಸುಧಾಕರ್ ಅವರನ್ನು ವೃದ್ಧರೊಬ್ಬರು ಭೇಟಿ ಮಾಡಲು ಮುಂದಾದಾಗ ಪೊಲೀಸರು ಅವರನ್ನು ಹೊರ ಹಾಕಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಅಗಸನಕಟ್ಟೆ ಗ್ರಾಮದ ಷಣ್ಮುಖಯ್ಯ ಎಂಬುವವರ ಮಗ ಬಸವರಾಜಯ್ಯ ಎಂಬವರಿಗೆ ಕೋವಿಡ್ ಇದ್ದು ಬೆಡ್ ಸಿಕ್ಕಿರಲಿಲ್ಲ. ನನ್ನ ಮಗನಿಗೆ ಬೆಡ್ ಬೇಕಿದೆ ಎಂದು ಸಚಿವರ ಬಳಿ ಮನವಿ ಮಾಡಲೆಂದು ಷಣ್ಮುಖಯ್ಯ ಕಾದು ಕುಳಿತಿದ್ದರು. ಆದರೆ ಸಚಿವರು ಬರುತ್ತಿದ್ದಂತೆ ಷಣ್ಮುಖಯ್ಯ ಅವರನ್ನು ಪೊಲೀಸರು ಹೊರ ಹಾಕಲು ಮುಂದಾಗಿದ್ದಾರೆ ಈ ವೇಳೆ ನನ್ನ ಮಗನಿಗೆ ಬೆಡ್ ಸಿಗ್ತಿಲ್ಲ. ಬೆಡ್ ಕೊಡಿಸಿ ಎಂದು ವೃದ್ಧ ವ್ಯಕ್ತಿ ಕೈ ಮುಗಿದು ಬೇಡಿಕೊಂಡರೂ ಕೂಡ ಅವರ ಮಾತು ಕೇಳದ ಪೊಲೀಸರು ಸಚಿವರನ್ನು ಭೇಟಿ ಮಾಡಿಸದೇ ಹೊರ ಕಳುಹಿಸಿದ್ದಾರೆ ಎನ್ನಲಾಗಿದೆ.
ಆರೋಗ್ಯ ಸಚಿವರಿಗೆ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಸಂಸದ ಜಿ.ಎಂ ಸಿದ್ದೇಶ್ವರ್ ಬೆಂಬಲ ನೀಡಿದರು.










