ಸಚಿವ ಡಾ.ಕೆ. ಸುಧಾಕರ್ ಅವರಿಗೂ ಕೊರೊನಾ ಆತಂಕ-ತಮ್ಮ ಮನೆಯ ಅಡುಗೆ ಭಟ್ಟನಿಗೆ ಕೊರೊನಾ ಪಾಸಿಟಿವ್…

152
firstsuddi

ಬೆಂಗಳೂರು : ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರಿಗೂ ಕೊರೊನಾ ಆತಂಕ ಶುರುವಾಗಿದ್ದು, ತಮ್ಮ ಮನೆಯ ಅಡುಗೆ ಭಟ್ಟನಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ತಮ್ಮ ಮನೆಯಲ್ಲೇ ಅಡುಗೆ ಕೆಲಸ ಮಾಡುತ್ತಿದ್ದವರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ, ಡಾ.ಕೆ ಸುಧಾಕರ್ ಅವರು ಹಾಗೂ ಅವರ ಮನೆಯವರೆಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಸಚಿವ ಸುಧಾಕರ್ ಅವರೇ ತಿಳಿಸಿದ್ದಾರೆ.