ಸರ್ಕಾರಿ ಕೆಲಸ ಕೊಡಿ, ಇಲ್ಲವೇ ಕೊಳವೆಬಾವಿ ತೋಡಿಸಿಕೊಡಿ : ಮತಪೆಟ್ಟಿಗೆಯಲ್ಲಿ ಯುವಕನ ಕೋರಿಕೆ ಪತ್ರ.

106
firstsuddi

ಮೈಸೂರು : ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ವೇಳೆ ಮತಪೆಟ್ಟಿಗೆಯಲ್ಲಿ ಮತದಾರರೊಬ್ಬರ ಕೋರಿಕೆ ಪತ್ರವೊಂದು ಪತ್ತೆಯಾಗಿದೆ.

‘ತಾನು ಕಷ್ಟದಲ್ಲಿBA, BEd, MA ಮಾಡಿದ್ದೇನೆ. ಆದರೆ ನನಗೆ ಕೆಲಸ ಇಲ್ಲ. ನಮ್ಮಪ್ಪನ 1.20 ಗುಂಟೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಅಂಬೇಡ್ಕರ್ ನಿಗಮದಿಂದ ತನಗೊಂದು ಕೊಳವೆಬಾವಿ ತೋಡಿಸಿಕೊಡಿ ಇಲ್ಲದಿದ್ದರೇ ಸರ್ಕಾರಿ ನೌಕರಿ ಕೊಡಿಸಿ, ಚುನಾವಣೆ ಇಲಾಖೆಯು ತನ್ನ ಹೆಸರನ್ನು ಗೌಪ್ಯವಾಗಿಟ್ಟು ಸರ್ಕಾರಕ್ಕೆ ಮನವಿ ತಲುಪಿಸಲಿ’ ಎಂದು ಮತದಾರ ಪತ್ರದಲ್ಲಿ ಕೋರಿಕೊಂಡಿದ್ದಾರೆ. ಜೊತೆಗೆ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ರಸಗೊಬ್ಬ ಬೆಲೆ ಕಡಿಮೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ರಾಜೇಂದ್ರ ಈ ಮನವಿ ಮಾಡಿದ್ದಾನೆ.