ಸಾಂಬಾರು ಪಾತ್ರೆಗೆ ಬಿದ್ದು 2 ವರ್ಷದ ಮಗು ಸಾವು…

46
firstsuddi

ಬಳ್ಳಾರಿ: ಮನೆಯ ಕಾರ್ಯಕ್ರಮಕ್ಕೆಂದು ಮಾಡಿದ್ದ ಸಾಂಬಾರು ಪಾತ್ರೆಗೆ ಬಿದ್ದು ಮಗು ಮೃತಪಟ್ಟಿರುವ ಘಟನೆ ಸಂಡೂರಿನಲ್ಲಿ ನಡೆದಿದೆ.

ಸಂಡೂರು ತಾಲ್ಲೂಕಿನ ಚೋರನೂರು ಹೋಬಳಿಯ ಎಚ್.ಕೆ.ಹಳ್ಳಿ ಗ್ರಾಮದಲ್ಲಿ ಮಂಜುನಾಥ ಮತ್ತು ಹುಲಿಗೆಮ್ಮ ದಂಪತಿಯ 2 ವರ್ಷದ ಸಮರ್ಥ ಮೃತಪಟ್ಟ ಬಾಲಕ.

ಬಿಸಿ ಸಾಂಬಾರು ತುಂಬಿದ್ದ ಪಾತ್ರೆ ಪಕ್ಕದಲ್ಲಿಟ್ಟಿದ್ದ ಹಪ್ಪಳ ತೆಗೆದುಕೊಳ್ಳಲು ಬಂದ ಮಗು ಪಾತ್ರೆಯೊಳಗೆ ಬಿದ್ದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ತೀವ್ರ ಸುಟ್ಟ ಗಾಯಗಳಿಂದ ಮಗು ಕೊನೆಯುಸಿರೆಳೆದಿದೆ.