ಸಿಲಿಕಾನ್ ಸಿಟಿಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ಎನ್‍ಐಎ ಅಧಿಕಾರಿಗಳು…

99
firstsuddi

ಬೆಂಗಳೂರು : ಶಂಕಿತ ಐಸಿಸ್ ಉಗ್ರರ ಮನೆ ಮೇಲೆ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಇಬ್ಬರು ಉಗ್ರರನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದರು. ಬಂಧಿತ ಉಗ್ರರು ಕುರಾನ್ ಎಂಬ ವಾಟ್ಸಾಪ್ ಗ್ರೂಪ್ ಮಾಡಿಕೊಂಡು ನಗರದ ಕೆಲವು ಯುವಕರನ್ನು ಐಸಿಸ್‍ಗೆ ಸೇರ್ಪಡೆಗೊಳ್ಳುವಂತೆ ಪ್ರೇರೇಪಿಸುತ್ತಿರುವುದಾಗಿ ತನಿಖೆ ವೇಳೆ ತಿಳಿದು ಬಂದಿತ್ತು. ಇದರಿಂದ ನಗರದಲ್ಲಿ ಮತ್ತೆ ಶೋಧಕಾರ್ಯ ಆರಂಭಿಸಿದ್ದ ಅಧಿಕಾರಿಗಳು ಥಣಿಸಂದ್ರ ಬಳಿ ಇರುವ ಎರಡು ಶಂಕಿತ ಉಗ್ರರ ಮನೆಗೆ ದಾಳಿ ನಡೆಸಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.