ಸೇನೆಯಿಂದ ನಿವೃತ್ತಿಯಾದ ಯೋಧ ಗ್ರಾಮದ ಹೊರವಲಯದ ಶೆಡ್‍ನಲ್ಲಿ ಸೆಲ್ಫ್ ಕ್ವಾರಂಟೈನ್-ಗ್ರಾಮಸ್ಥರಿಂದ ಮೆಚ್ಚುಗೆ…

134
firstsuddi

ಹಾವೇರಿ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಬಂದಿರುವ ಯೋಧರೊಬ್ಬರು ಗ್ರಾಮದ ಹೊರವಲಯದಲ್ಲಿ ಇರುವ ಶೆಡ್‍ನಲ್ಲಿ ಸೆಲ್ಫ್ ಹೋಂ ಕ್ವಾರಂಟೈನ್ ಆಗಿರುವ ಘಟನೆ ತಾಲ್ಲೂಕಿನ ಕೋಡಬಾಳ ಗ್ರಾಮದಲ್ಲಿ ನಡೆದಿದೆ. 2003ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಕೋಡಬಾಳ ಗ್ರಾಮದ ಯೋಧ ಲಿಂಗರಾಜ ಶಿವಸಿಂಪಿಗೇರ ಅವರು 17 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಆಗಸ್ಟ್30 ರಂದು ಸೇನೆಯಿಂದ ನಿವೃತ್ತಿ ಪಡೆದು ಗ್ರಾಮಕ್ಕೆ ವಾಪಸ್ಸಾಗಿದ್ದರು. ಆದರೆ ದೇಶಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿರುವುದರಿಂದ ಕೊರೊನಾ ಲಕ್ಷಣಗಳು ಇಲ್ಲದಿದ್ದರೂ ಮುಂಜಾಗೃತ ಕ್ರಮವಾಗಿ ಗ್ರಾಮದ ಹೊರವಲಯದಲ್ಲಿ ಇರುವ ತಗಡಿನ ಶೆಡ್‍ನಲ್ಲಿ ಯೋಧ ಲಿಂಗರಾಜು ಅವರು 14 ದಿನಗಳ ಕಾಲ ಕ್ವಾರಂಟೈನ್ ಆಗಿದ್ದು, ಯೋಧರ ಈ ಸಾಮಾಜಿಕ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.