ಹುಬ್ಬಳ್ಳಿ : ರಸ್ತೆ ಕ್ರಾಸ್ ಮಾಡುವಾಗ ಸ್ಕೂಟಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ನವನಗರದ ಆರ್ ಟಿಓ ಕಚೇರಿಯ ಕ್ರಾಸಿಂಗ್ ಬಳಿ ನಡೆದಿದೆ.
ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಬಸ್ ಚಾಲಕ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಸ್ಕೂಟಿ ಬಸ್ಸಿನ ಚಕ್ರದ ಕೆಳಗಡೆ ಸಿಕ್ಕಿಕೊಂಡಿದೆ ಪರಿಣಾಮ ಅಮರನಗರದ ಮಹೇಶ ಹೊಸಮನಿ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










