ಪಾರ್ಕ್, ಜಿಮ್, ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಿ – ಬಿಬಿಎಂಪಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ…

160
Firstsuddi

ಬೆಂಗಳೂರು : ದಿನೇ ದಿನೆ ನಿಯಂತ್ರಣ ಮೀರಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮತ್ತೆ ನಿಯಂತ್ರಣ ಹೇರಲು ಬಿಬಿಎಂಪಿಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಅಪಾರ್ಟ್ಮೆಂಟ್ ಗಳಲ್ಲಿರುವ ಕಾಮನ್ ಏರಿಯಾಗಳು, ಜಿಮ್, ಪಾರ್ಟಿ ಹಾಲ್, ಸ್ವಿಮ್ಮಿಂಗ್ ಪೂಲ್ ಗಳನ್ನು ಬಂದ್ ಮಾಡಬೇಕು. ಸಿನಿಮಾ ಮಂದಿರಗಳಲ್ಲಿ ಶೇ. 100 ಜನ ಇರಲು ಅವಕಾಶ ಇರುವುದರಿಂದ ಕೊರೊನಾ ಹರಡಬಹುದು, ಇದನ್ನು ಶೇ. 50 ಕ್ಕೆ ಇಳಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ ಎಂದರು.

ಇನ್ನು ಇಡೀ ಮದುವೆಗೆ 200 ಜನರಿಗೆ ಮಾತ್ರ ಅವಕಾಶ ಇದ್ದು, ಮದುವೆ ಹಾಲ್ ಮಾಲೀಕರೇ ಇದಕ್ಕೆ ಸಂಪೂರ್ಣ ಜವಾಬ್ದಾರರು ಎಂದರು. ಇನ್ನು ಮಾಲ್ಗಳಲ್ಲಿ ಎಲ್ಲಾ ಕಡೆ ಮಾರ್ಷಲ್ಸ್ ಇರಲು ಸಾಧ್ಯವಿಲ್ಲ. ಹಾಗಾಗಿ ಮಾಲ್ ಮಾಲೀಕರೇ ಜವಾಬ್ದಾರಿ ವಹಿಸಿಕೊಳ್ಳಬೇಕು. ನಗರದಲ್ಲಿ ಹಲವಾರು ಎಕ್ಸಿಬ್ಯುಷನ್ ಆಗ್ತಿವೆ. ಇಲ್ಲಿಯೂ ಕೂಡ ಕೋವಿಡ್ ನಿಯಮ ಪಾಲನೆ ಮಾಡಬೇಕು ಎಂದರು.

ಮುಂದಿನ ಒಂದು ವಾರದಲ್ಲಿ ಟೆಸ್ಟ್ ಅನ್ನು 50 ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು ಪಾಸಿಟಿವ್ ಕಂಡು ಬಂದ ವ್ಯಕ್ತಿಯ ಕಾಂಟ್ಯಾಕ್ಟ್ ಟ್ರೇಸಿಂಗ್ ಗಾಗಿ ಶಿಕ್ಷಕರು, ಆರೋಗ್ಯ, ಕಂದಾಯ, ಇಂಜಿನಿಯರ್ ವಿಭಾಗದ ಅಧಿಕಾರಿ ನೌಕರರನ್ನು ಬಳಕೆ ಮಾಡಿಕೊಂಡು ಒಂದು ಕೇಸ್ ಗೆ 15 ಜನರ ಗುರುತಿಸುವ ಕೆಲಸ ಆಗುತ್ತಿದೆ. ಯಾರ್ಯಾರ ಸಂಪರ್ಕ ಇದೆಯೋ ಅವರೆಲ್ಲರ ಟೆಸ್ಟಿಂಗ್ ಮಾಡಲಾಗುತ್ತದೆ ಎಂದರು.

ಸೋಂಕು ಲಕ್ಷಣಗಳಿರುವ ಜನರನ್ನು ಬೇಗ ಆಸ್ಪತ್ರೆಗೆ ತಲುಪಿಸಲು, 198 ವಾರ್ಡ್ ಗಳಿಗೆ 198 ಆಂಬ್ಯುಲೆನ್ಸ್ ಗಳನ್ನು ಬಾಡಿಗೆಗೆ ಪಡೆಯಲಾಗುವುದು. ಈ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸಿ 150 ಕೋಟಿ ರೂ ಕೇಳಲಾಗಿದೆ. ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲೇ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಜೊತೆಗೆ 3 ಕೋವಿಡ್ ಕೇರ್ ಸೆಂಟರ್ ಗಳನ್ನು ಸೋಮವಾರದಿಂದ ತೆರೆಯಲಾಗುತ್ತಿದೆ. ಹೆಚ್ಚು ಪ್ರಕರಣ ಕಂಡುಬಂದರೆ ಖಾಸಗಿ ಆಸ್ಪತ್ರೆಗಳು ಸಿದ್ಧವಾಗಿರುತ್ತವೆ ಎಂದರು.