ಹಗರಣಗಳ ತನಿಖೆ ಮಾಡಿಸಿ, ನಿಮ್ಮನ್ನ ಎಲ್ಲಿ ನಿಲ್ಲಿಸಬೇಕು ಅಲ್ಲಿ ನಿಲ್ಲಿಸುತ್ತೇವೆ : ಸಿದ್ದುಗೆ ಎಚ್ಚರಿಕೆ ನೀಡಿದ ಬಿಎಸ್‍ವೈ.

79
firstsuddi

ರಾಯಚೂರು : ನಿಮ್ಮ ಹಗರಣಗಳನ್ನ ತನಿಖೆ ಮಾಡಿಸಿ, ನಿಮ್ಮನ್ನ ಎಲ್ಲಿ ನಿಲ್ಲಿಸಬೇಕು ಅಲ್ಲಿ ನಿಲ್ಲಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಎಚ್ಚರಿಕೆ ನೀಡಿದರು.

ರಾಯಚೂರು ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಮೋದಿ ಬಗ್ಗೆ ಮಾತನಾಡುವ ಯೋಗ್ಯತೆಯಿದೆಯಾ ನಿಮಗೆ. ಪ್ರಧಾನಿ ಕಾಲಡಿ ಕುಳಿತುಕೊಳ್ಳುವ ಯೋಗ್ಯತೆಯೂ ಇಲ್ಲ. ಬಚ್ಚಾ ರಾಹುಲ್ ಗಾಂಧಿ ಮೋದಿ ಬಗ್ಗೆ ಮಾತನಾಡುತ್ತಾನೆ. ಮುಂಬರುವ ವಿಧಾನ ಮಂಡಲದಲ್ಲಿ ನಿಮ್ಮ ಎಲ್ಲಾ ಹಗರಣಗಳನ್ನ ಬಯಲಿಗೆಳೆಯುತ್ತೇವೆ. ನಿಮ್ಮ ಹಗರಣಗಳನ್ನ ತನಿಖೆ ಮಾಡಿಸಿ, ನಿಮ್ಮನ್ನ ಎಲ್ಲಿ ನಿಲ್ಲಿಸಬೇಕು ಅಲ್ಲಿ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಬರ್ಟ್ ವಾದ್ರಾ ಮಾಡಿದ್ದ ಹಗರಣದ ಪಟ್ಟಿ ಇದೆಯಾ..?, ನ್ಯಾಷನಲ್ ಹೆರಾಲ್ಡ್ ಹಗರಣ ಗೊತ್ತಿಲ್ವೇ..?, ಈವರೆಗೆ ಹಗರಣ ಮಾಡದ ಮೋದಿ ಬಗ್ಗೆ ಮಾತನಾಡ್ತೀರಾ..?, 25 ಲಕ್ಷ ಹುಬ್ಲೋಟ್ ವಾಚ್ ಯಾರೂ ಕೊಟ್ಟಿದ್ರು..? ಗೊತ್ತಿಲ್ವಾ. ರೀ ಡೂ ಹೆಸರಲ್ಲಿ ರಿಯಲ್ ಕೋಟ್ಯಂತರ ರೂ.ಬೆಲೆಬಾಳುವ ಜಮೀನನ್ನ ರಿಯಲ್ ಎಸ್ಟೇಟ್ ಅವರಿಗೆ ಮಾರಾಟ ಮಾಡಿದ್ದೀರಿ ಎಂದು ಗುಡುಗಿದರು.

ಏಮ್ಸ್ ಅನ್ನು ರಾಯಚೂರು ಜಿಲ್ಲೆಗೆ ತರಲು ಮುಂದಾಗಲು ಸಿಎಂಗೆ ಹೇಳಿದ್ದೇನೆ. ಸಿದ್ದರಾಮಯ್ಯ-ಡಿಕೆಶಿ ಅಧಿಕಾರಕ್ಕೆ ಬರುತ್ತೇವೆ ಅಂತ ಮಾತನಾಡುತ್ತಾರೆ. ನಾನು ರಾಯರ ಕ್ಷೇತ್ರದ ಹತ್ತಿರದಲ್ಲಿ ಹೇಳುತ್ತೇನೆ 150 ಕ್ಷೇತ್ರಗಳಲ್ಲಿ ನಮ್ಮ ಗೆಲುವು ತಡೆಯಲು ಯಾವ ಶಕ್ತಿಯಿಂದ ಸಾಧ್ಯವಿಲ್ಲ ಎಂದರು.