ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲ್ಯಪ್ಪನಹಳ್ಳಿಯ ಕ್ವಾರಿ ಹಳ್ಳದಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರು ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ.
ಮೃತ ಸಹೋದರರನ್ನು ಪವನ್ ಕುಮಾರ್(18) ಮತ್ತು ಮಧು ಕುಮಾರ್(14) ಎಂದು ಗುರುತಿಸಲಾಗಿದೆ. ಬೇಸಿಗೆ ಬಿಸಿ ತಾಳಲಾರದೆ ಯುವಕರ ಜತೆ ಈಜಲು ಹೋಗಿದ್ದಾಗ ಮುಳುಗುತ್ತಿದ್ದ ತನ್ನ ತಮ್ಮ ಮಧು ಕುಮಾರ್ ನನ್ನು ರಕ್ಷಿಸಲು ಹೋಗಿ ಅಣ್ಣ ಪವನ್ ಕುಮಾರ್ ಸಹ ನೀರು ಪಾಲಾಗಿದ್ದಾನೆ.
ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










