ಹಾಸನ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ…

386
firstsuddi

ಹಾಸನ : ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವ ಘಟನೆ ತಾಲ್ಲೂಕಿನ ಹಳೇಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಹಳೇಕೊಪ್ಪಲು ಗ್ರಾಮದ ಸುತ್ತಮುತ್ತ ಹಸು, ಕರು, ನಾಯಿಗಳನ್ನು ಹೊತ್ತುಯ್ದು ತಿಂದಿದ್ದ ಚಿರತೆ ಸೆರೆಯಾಗಿದ್ದು, ಇದೇ ಗ್ರಾಮದಲ್ಲಿ ಈವರೆಗೂ ಎರಡು ಚಿರತೆಗಳು ಬೋನಿಗೆ ಬಿದ್ದಿದ್ದು, ಚಿರತೆಯನ್ನು ನೋಡಲು ಗ್ರಾಮದ ಜನರು ಮುಗಿಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.