ಹಿಜಾಬ್ ಪರ ಹೋರಾಟಗಾರ್ತಿಗೆ ಜೀವ ಬೆದರಿಕೆ – ದೂರು ದಾಖಲು…

74
firstsuddi

ಬೆಳಗಾವಿ : ಹಿಜಾಬ್ ಪರ ಹೋರಾಟ ಮಾಡಿದ್ದ ಸಾಮಾಜಿಕ ಹೋರಾಟಗಾರ್ತಿ ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ ಕರೆ ಬಂದಿದ್ದು ಈ ಸಂಬಂಧ ಸಿಇಎನ್ ಠಾಣೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ಸೀಮಾ ಇನಾಂದಾರ್ ಮೊಬೈಲ್ ಗೆ ವಾಟ್ಸಪ್ ಕರೆ ಮಾಡಿರುವ ಅಪರಿಚಿತ ವ್ಯಕ್ತಿ, ಹಿಜಬ್, ಹಿಜಬ್ ಅಂತಾ ಏನ್ ಹೇಳ್ತಿದಿಯಾ, ಆಜಾದಿ ಬೇಕಾ ನಿಮಗೆ? ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ ಎಂದು ಬೆದರಿಕೆ ಹಾಕಿದ್ದಾನೆ. ಸೀಮಾ ಇನಾಂದಾರ್ ಈ ಬಗ್ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಹಿಜಾಬ್ ಪರ ಪ್ರತಿಭಟನೆಯಲ್ಲಿ ಸೀಮಾ ಇನಾಂದಾರ್ ಭಾಗವಹಿಸಿದ್ದರು.