ಹಿಜಾಬ್ ಸಂಘರ್ಷ – ಬೆಳಗಾವಿ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ…

80
firstsuddi

ಬೆಳಗಾವಿ : ಹಿಜಬ್ ಧರಿಸಲು ಅವಕಾಶ ನೀಡಿ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ನಗರದ ವಿಜಯ ಪ್ಯಾರಾ ಮೆಡಿಕಲ್ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ ಮಾಡಲಾಗಿದೆ.

ಹಿಜಬ್ ಗೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರಿಂದ ನಮಗೆ ತೊಂದರೆ ಆಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕಾಲೇಜಿಗೆ ರಜೆ ಘೋಷಣೆ ಮಾಡಲಾಗುತ್ತಿದ್ದು, ಮುಂದಿನ ಆದೇಶವರೆಗೂ ಕಾಲೇಜಿಗೆ ರಜೆ ಇರಲಿದೆ. ಈ ಬಗ್ಗೆ ಡಿಸಿ ಜೊತೆಗೆ ಚರ್ಚಿಸುವೆ. ಕಾಲೇಜು ಮರಳಿ ಪ್ರಾರಂಭವಾದ ಬಳಿಕ ಹೆಚ್ಚುವರಿ ತರಗತಿ ತಗೆದುಕೊಳ್ಳುತ್ತೇವೆ. ಸದ್ಯ ಯಾವ ಮಕ್ಕಳಿಗೂ ತೊಂದರೆಯಾಗಬಾರದು ಎಂದು ರಜೆ ಘೋಷಿಸುತ್ತಿದ್ದೇವೆ ಎಂದು ಪ್ರಾಚಾರ್ಯ ಡಾ.ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.