ಹಿರೇಮಗಳೂರಿನಲ್ಲಿಂದು ಕರ್ನಾಟಕ ಸಂಗೀತದ ಪಿತಾಮಹ ಸಂತ ಶ್ರೀ ತ್ಯಾಗರಾಜ ಆರಾಧನೆ…

57
firstsuddi

ಚಿಕ್ಕಮಗಳೂರು: ಸಾಂಸ್ಕೃತಿಕ ಸಂಘದ ವತಿಯಿಂದ ಕರ್ನಾಟಕ ಸಂಗೀತದ ಪಿತಾಮಹ ಸಂತ ಶ್ರೀ ತ್ಯಾಗರಾಜರು, ದಾಸ ಶ್ರೇಷ್ಠ ಶ್ರೀ ಪುರಂದರದಾಸರು ಮತ್ತು ಕನಕದಾಸರ ಆರಾಧನಾ ಮಹೋತ್ಸವ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರ ಸ್ವಾಮಿದೇವಾಲಯದಲ್ಲಿಂದು ನಡೆಯಲಿದೆ.

ಬೆಳಿಗ್ಗೆ 9.30ಕ್ಕೆ ಸ್ಥಳೀಯ ಮತ್ತು ಹೊರ ಊರುಗಳ ಸಂಗೀತಗಾರರಿಂದ ಊಂಛವೃತ್ತಿ, ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, ಸಂಗೀತ ಸೇವೆ ಜರುಗಲಿವೆ.