ಯುಎಸ್‍ಎ ಮಾಜಿ ಅಧ್ಯಕ್ಷ ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ನಿರ್ಬಂಧ ಹೇರಿದ ರಷ್ಯಾ.

52
firstsuddi

ಮಾಸ್ಕೋ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ಪ್ರವೇಶವನ್ನು ನಿರ್ಬಂಧಿಸಿ ರಷ್ಯಾ ಆದೇಶ ಪ್ರಕಟಿಸಿದೆ.

ರಷ್ಯಾ ಸಚಿವಾಲಯದ ಹೇಳಿಕೆಯ ಪ್ರಕಾರ ಜೋ ಬೈಡನ್ ಆಡಳಿತವು ವಿಧಿಸಿದ ರಷ್ಯಾದ ವಿರೋಧಿ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಯುಎಸ್‍ಎ ಕಾರ್ಯನಿರ್ವಹಕ ಶಾಖೆಯ ಹಲವಾರು ಹಿರಿಯ ಸದಸ್ಯರು ಸೇರಿದಂತೆ 500 ಅಮೇರಿಕನ್ನರನ್ನು ರಷ್ಯಾ ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದೆ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ರಷ್ಯಾವನ್ನು ಆರ್ಥಿಕವಾಗಿ ಕುಗ್ಗಿಸಲು ಅಮೆರಿಕ ಮತ್ತು ಯುರೋಪ್ ದೇಶಗಳು ನಾನಾ ಕ್ರಮಗಳನ್ನು ಜಾರಿ ಮಾಡುತ್ತಿವೆ. ಈ ಕ್ರಮದ ಭಾಗವಾಗಿ ಅಮೆರಿಕ, ರಷ್ಯಾದ ನೂರಕ್ಕೂ ಅಧಿಕ ಕಂಪನಿಗಳನ್ನು, ವ್ಯಕ್ತಿಗಳನ್ನು ನಿರ್ಬಂಧ ಪಟ್ಟಿಗೆ ಸೇರಿಸಿದೆ. ಈ ಕ್ರಮಕ್ಕೆ ತಿರುಗೇಟು ಎನ್ನುವಂತೆ ರಷ್ಯಾ ಈಗ ಅಮೆರಿಕದ 500 ಮಂದಿಗೆ ನಿರ್ಬಂಧ ಹೇರಿದೆ.

ಏಪ್ರಿಲ್‌ನಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ವಿಶ್ವಸಂಸ್ಥೆಗೆ ಪ್ರಯಾಣಿಸುವ ಪತ್ರಕರ್ತರಿಗೆ ವೀಸಾಗಳನ್ನು ನೀಡಲು ಅಮೆರಿಕ ನಿರಾಕರಿಸಿತ್ತು.