ಹುಟ್ಟುಹಬ್ಬದಂದೇ ಮೃತಪಟ್ಟ ಮೂರು ವರ್ಷದ ಬಾಲಕಿ!

72
firstsuddi

ಚಾಮರಾಜನಗರ : ಹುಟ್ಟುಹಬ್ಬ ದಿನದಂದೇ ಮೂರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕೆಂಗಾಕಿ ಗ್ರಾಮದಲ್ಲಿ ನಡೆದಿದೆ.

 ನಿವೇದಿತಾ(3) ಮೃತ ಬಾಲಕಿ. ನಿವೇದಿತಾ ಕುಟುಂಬ ತೋಟದ ಮನೆಯಲ್ಲಿ ವಾಸವಾಗಿದ್ದರು. ಆಟ ಆಡುವಾಗ ನಿವೇದಿತಾಗೆ ಪಂಪ್ ಸೆಟ್ ಸ್ಪರ್ಶಿಸಿ ಸಾವನ್ನಪ್ಪಿದ್ದಾಳೆ. ಇಂದು ನಿವೇದಿತಾ ತನ್ನ 3ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ವಿಧಿಯಾಟವೇ ಬೇರೆ ಆಗಿತ್ತು. ಸಂಭ್ರಮ ಮನೆ ಮಾಡಬೇಕಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.

ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.