ಹುಬ್ಬಳ್ಳಿ ಗಲಭೆಯ ಪ್ರಮುಖ ಆರೋಪಿ ಐದು ದಿನ ಪೊಲೀಸ್ ಕಸ್ಟಡಿಗೆ…

58
firstsuddi

ಹುಬ್ಬಳ್ಳಿ : ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಎಂದೇ ಹೇಳಲಾಗಿರೋ ವಾಸೀಂ ಪಠಾಣ್ ನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಮುಂಬೈ ಮೂಲದ ರಝಾ ಅಕಾಡೆಮಿಯೂ ಗಲಭೆ ಕೃತ್ಯದಲ್ಲಿ ಷಡ್ಯಂತ್ರ ರೂಪಿಸಿತ್ತು ಅನ್ನೋ ಮಾತು ಕೇಳಿ ಬಂದಿದೆ. ಇದಕ್ಕೆ ಪುಷ್ಟಿ ನೀಡೋ ರೀತಿಯಲ್ಲಿ ಬಂಧಿತ ವಾಸೀಂ ಪಠಾಣ್, ತೌಫೆಲ್ ಮುಲ್ಲಾ ರಝಾ ಅಕಾಡೆಮಿಯ ಮುಖಂಡರು. ಏನಾದ್ರೂ ನೆಪ ಸಿಕ್ಕರೆ ಗಲಭೆ ಸೃಷ್ಟಿಸೋ ಪ್ಲ್ಯಾನ್ ನಲ್ಲಿದ್ದ ಇವರಿಗೆ ಯುವಕನೋರ್ವ ಹಾಕಿದ ವಿವಾದಾತ್ಮಕ ಪೋಸ್ಟ್ ಪ್ರಚೋದನೆ ಕೊಟ್ಟಿದೆ.

ಮುಖ್ಯ ಆರೋಪಿ ವಾಸೀಂ ಪಠಾಣ್ ಹಾಗೂ ತೌಫೆಲ್ ಮುಲ್ಲಾ ನನ್ನು ನಿನ್ನೆ ಸಂಜೆ ಹುಬ್ಬಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇಬ್ಬರನ್ನೂ ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳಲಾಗಿತ್ತು. ಆದರೆ ನ್ಯಾಯಾಧೀಶರು ಐದು ದಿನಗಳ ಕಾಲ ಮಾತ್ರ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ. ಹೀಗಾಗಿ ವಾಸೀಂ ಪಠಾಣ್ ಹಾಗೂ ತೌಫೆಲ್ ಮುಲ್ಲಾ ನನ್ನು ವಶಕ್ಕೆ ಪಡೆದಿರೋ ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ತೀವ್ರಗೊಳಿಸಿದ್ದಾರೆ.

ವಾಸೀಂ ಬೇಪಾರಿ, ತೌಫೆಲ್ ಮುಲ್ಲಾ ಜೊತೆ ಸೇರಿ ಮಸಲತ್ತು ನಡೆಸಿದ್ದು ನಿಜ ಎಂದು ಬಾಯ್ಬಿಟ್ಟಿದ್ದಾನೆ. ವಾಟ್ಸಪ್ ಗ್ರೂಪ್ ರಚಿಸಿದ್ದು, ಪ್ರತಿಭಟನೆ, ಗಲಾಟೆಗೆ ಕರೆ ನೀಡಿದ್ದು ಹೌದು. ಆದರೆ ಅಷ್ಟೊಂದು ದೊಡ್ಡ ಪ್ರಮಾಣದ ಕಲ್ಲುಗಳು ಅಲ್ಲಿ ಹೇಗೆ ಬಂದ್ವು ಅನ್ನೋದು ಗೊತ್ತಿಲ್ಲ ಅಂತೆಲ್ಲಾ ಪೊಲೀಸರ ಮುಂದೆ ವಾಸೀಂ ಹೇಳಿದ್ದಾನೆ ಎನ್ನಲಾಗಿದೆ.

ಈ ನಡುವೆ ಪ್ರಚೋದನಾಕಾರಿ ಪೋಸ್ಟ್ ಹಾಕಿ ಗಲಭೆಗೆ ಕಾರಣನಾಗಿದ್ದ ಯುವಕನ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಯುವಕನಿಗೆ ಈಗಾಗಲೇ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಪ್ರಕರಣ ವಿಚಾರಣಾ ಹಂತದಲ್ಲಿರೋದ್ರಿಂದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.