ಬೆಂಗಳೂರು : ಹುಬ್ಬಳ್ಳಿ ಗಲಭೆ ಪ್ರಕರಣ ಸಂಬಂಧ ಮತ್ತೋರ್ವ ಮಾಸ್ಟರ್ ಮೈಂಡ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ ಗಲಭೆ ನಂತರ ಕಳೆದ ಒಂದು ವಾರದಿಂದ ಮೊಹಮ್ಮದ್ ಆರೀಫ್ ನಾಪತ್ತೆಯಗಿದ್ದನು. ಗಲಭೆಗೆ ಕಾರಣರಾದವರು ಸೃಷ್ಟಿ ಮಾಡಿದ್ದ ವಾಟ್ಸಪ್ ಗ್ರೂಪ್ ನಲ್ಲಿ ಕೆಲವೊಂದು ವಾಯ್ಸ್ ಮೆಸೇಜ್ ಮತ್ತು ಸಂದೇಶಗಳನ್ನು ಆಧಾರಿಸಿ ಇದೀಗ ಹುಬ್ಬಳ್ಳಿ ಪೊಲೀಸರು ಮೊಹಮ್ಮದ್ ಆರೀಫ್ ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಗಲಭೆಗೆ ಮೂಲ ಪಿತೂರಿ ನಡೆಸಿದವರಾರು, ಇದರ ಹಿಂದಿರೋ ಸಂಘಟನೆಗಳು, ವ್ಯಕ್ತಿಗಳ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದು, ಮತ್ತಷ್ಟು ಜನರನ್ನು ಬಂಧಿಸೋ ಸಾಧ್ಯತೆಗಳಿವೆ.










