ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಪತ್ನಿಗೆ ಐಟಿ ನೋಟಿಸ್…

80
firstsuddi

ಹಾಸನ : ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್​.ಡಿ.ರೇವಣ್ಣ ಅವರು, ನಮ್ಮ ತಾಯಿಗೆ ಆಸ್ತಿ ವಿವರದ ಬಗ್ಗೆ ಮಾಹಿತಿ ಕೇಳಿ ನೋಟಿಸ್ ನೀಡಿದ್ದಾರೆ. ನಮ್ಮಮ್ಮ, ನಮ್ಮಪ್ಪ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾರಾ? ನಮ್ಮ ಜಮೀನನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ. ಅದನ್ನು ನೋಡಬೇಕು ಅದನ್ನು ನೋಡದೆ ನಮ್ಮ ತಾಯಿಗೆ ನೋಟೀಸ್ ಕೊಟ್ಟಿದ್ದಾರೆ. ಆರ್ ಟಿಓದಲ್ಲಿ ನೂರು ಕೋಟಿ ಇನ್ನೂರು ಕೋಟಿ ಲೂಟಿ ಹೊಡೆದಿದ್ದು, ಅವರಿಗೇಕೆ ನೀವು ನೋಟೀಸ್ ನೀಡಲ್ಲ. ಒಂದು ಎಕರೆಯಲ್ಲಿ ಎಷ್ಟು ಬೆಳೆ ಬೆಳೆಯುತ್ತೇವೆ ಬಂದು ನೋಡಲಿ ಎಂದು ಎಂದರು.

ನಾನೇನು ಹೊಸದಾಗಿ ಆಸ್ತಿ ಮಾಡಲು ಹೋಗಿದ್ದೇನಾ? ನಗರಸಭೆಯಿಂದ ಸೈಟ್ ಮಾಡಲು ಹೋಗಿದ್ದೇವಾ? ಒಂದು ಪಕ್ಷವನ್ನು ಗುರಿ ಇಟ್ಟುಕೊಂಡು ಈ ರೀತಿಯೆಲ್ಲಾ ಮಾಡಲು ಹೋಗಬೇಡಿ. ಕಾನೂನು ರೀತಿ ರೀವಾಜಗಳು ಏನಿದೆ ಆ ರೀತಿ ನೋಟಿಸ್ ಕೊಡಿ. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಎಲೆಕ್ಷನ್ ಗೆ ನಿಲ್ಲುತ್ತಿದ್ದಾರೆ. ಅಂತಹವರಿಗೆ ನೋಟಿಸ್ ಕೊಡುತ್ತಿಲ್ಲ. ಉತ್ತರ ಕೊಡುತ್ತೇವೆ ನಮಗೂ ಕಾಲ ಬರುತ್ತೆ. ಇದೇ ಏನು ಶಾಶ್ವತವಾಗಿ ಇರಲ್ಲ. ಏನಾದರೂ ಕದ್ದು ವ್ಯವಸಾಯ ಮಾಡುತ್ತಿದ್ದೇವಾ ಅಂತ ಡ್ರೋಣ್ ಸರ್ವೆ ಮಾಡಲಿ ಎಂದು ಗುಡುಗಿದ್ದಾರೆ.