ಮೈಸೂರು : ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಾ.ರಾ ಮಹೇಶ್ ಅವರು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಹೆಚ್. ವಿಶ್ವನಾಥ್ ಅವರು ರಾಜಕೀಯ ವ್ಯಭಿಚಾರಿ. ಆಮಿಷಕ್ಕೆ ಒಳಗಾಗಿ ಪಕ್ಷ ಬಿಟ್ಟು ಹೋಗುವುದು ರಾಜಕಾರಣದ ವ್ಯಭಿಚಾರ. ಹೆಚ್. ವಿಶ್ವನಾಥ್ ಅವರನ್ನು ನಾನೇ ಜೆಡಿಎಸ್ ಜೆಡಿಎಸ್ ಪಕ್ಷಕ್ಕೆ ಕರೆ ತಂದು ಪಕ್ಷಕ್ಕೆ ವಿಷ ಹಾಕಿದ್ದೇನೆ. ಸದನದಲ್ಲಿ ನಾನು ಅವರ ಬಗ್ಗೆ ಮಾತನಾಡಿರುವುದಕ್ಕೆ ಈಗಲೂ ಬದ್ಧನಾಗಿದ್ದೇನೆ. ಅವರು ಯಾವಾಗ ಬೇಕಾದರೂ ಇದರ ಬಗ್ಗೆ ಚರ್ಚೆ ಮಾಡಲು ಅಥವಾ ದೇವಸ್ಥಾನಕ್ಕೆ ಹೋಗಲು ಕರೆದರೆ ನಾನು ಯಾವಾಗಲೂ ಸಿದ್ದನಾಗಿರುತ್ತೇನೆ. ಅಲ್ಲದೇ ಅವರ ಜೊತೆಯಲ್ಲಿ ಚರ್ಚಿಸುತ್ತಾ ಅವರ ಇನ್ನಷ್ಟು ಚರಿತ್ರೆಯನ್ನು ಬಿಚ್ಚಿಡುತ್ತೇನೆ. ಮಾಜಿ ಪ್ರಧಾನಿ ದೇವೇಗೌಡರಿಗೆ ಹಾಗೂ ಜೆಡಿಎಸ್ ಪಕ್ಷಕ್ಕೆ ವಿಷ ಹಾಕಿದವರು ಬಹಳ ಮಂದಿ ಇದ್ದಾರೆ. ಆದರೆ ವಿಶ್ವನಾಥ್ ಅವರು ಪಕ್ಷಕ್ಕೆ ಕಾರ್ಕೋಟ ವಿಷ ಹಾಕಿದ್ದಾರೆ, ಅದನ್ನೆಲ್ಲ ಅರಗಿಸಿಕೊಳ್ಳುವ ಧೈರ್ಯ ನಮ್ಮ ನಾಯಕರಿಗೆ ಇದೆ ಎಂದು ಕಿಡಿಕಾರಿದರು.