1 ದಿನದಲ್ಲಿ 120 ಪಬ್‌ಗಳಲ್ಲಿ ಕುಡಿದು ಗಿನ್ನೆಸ್ ವಿಶ್ವ ದಾಖಲೆ ಬರೆದ 69ರ ವ್ಯಕ್ತಿ.

44
firstsuddi

ಒಂದು ದಿನದಲ್ಲಿ ಒಂದಲ್ಲ ಎರಡಲ್ಲ 120 ಬಾರ್​​ಗಳಲ್ಲಿ ಕುಡಿದು ವಿಶ್ವದಾಖಲೆ ನಿರ್ಮಿಸಿದ 69ರ ಹರೆಯದ ವ್ಯಕ್ತಿಯೊಬ್ಬ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದಾನೆ. ಆಸ್ಟ್ರೇಲಿಯಾದ ಡೇವಿಡ್ ಕ್ಲಾರ್ಕ್ಸನ್(69) 24 ಗಂಟೆಗಳಲ್ಲಿ ಅತಿ ಹೆಚ್ಚು ಬಾರ್​​ಗಳಿಗೆ ಭೇಟಿ ನೀಡಿ ಗಿನ್ನೆಸ್ ವಿಶ್ವ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಏಪ್ರಿಲ್ 12 ರಂದು, ಬೆಳಿಗ್ಗೆಯಿಂದ ಒಟ್ಟು 24 ಗಂಟೆಗಳಲ್ಲಿ 120 ಪಬ್‌ಗಳಿಗೆ ಭೇಟಿ ನೀಡಿ ಕುಡಿದು ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಒಂದು ದಿನದಲ್ಲಿ 99 ಪಬ್​​ಗಳಿಗೆ ಭೇಟಿ ನೀಡಿ ದಾಖಲೆ ಮಾಡಿದ್ದ ಡೇವಿಡ್, ಇದೀಗ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾನೆ.

ಈ ದಾಖಲೆಯನ್ನು ಸಿಡ್ನಿಯ ಕ್ಯಾಪ್ಟನ್ ಕುಕ್ ಹೋಟೆಲ್‌ನಿಂದ ಪ್ರಾರಂಭಿಸಿ, ಕೊನೆಯದಾಗಿ ಸಸೆಕ್ಸ್ ಗಾರ್ಡನ್ ಬಾರ್‌ನಲ್ಲಿ ಮುಗಿಸಿದ್ದು, ಅಲ್ಲಿ ಅವರಿಗೆ ಪ್ರಶಸ್ತಿ ನೀಡಲಾಯಿತು ಮತ್ತು ಅವರ ಬಹು-ಆಕಾಂಕ್ಷೆಯ ದಾಖಲೆಯನ್ನು ಪ್ರಮಾಣೀಕರಿಸಲಾಯಿತು. ಕುತೂಹಲಕಾರಿ ಸಂಗತಿಯೆಂದರೇ ಡೇವಿಡ್, ಒಂದು ಪಬ್​​ನಿಂದ ಇನ್ನೊಂದು ಪಬ್​​ಗೆ ನಡೆದುಕೊಂಡು ಹೋಗಿಯೇ ದಾಖಲೆ ಬರೆದಿದ್ದಾರೆ.