1.92 ಕೋಟಿ ರೂ. ಅಮಾನ್ಯ ನೋಟುಗಳು ಪತ್ತೆ – ಮೂವರನ್ನು ಬಂಧಿಸಿದ ಪೊಲೀಸರು…

90
firstsuddi

ಮಂಗಳೂರು : 1.92 ಕೋಟಿ ರೂಪಾಯಿ ಅಮಾನ್ಯ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡು ಮೂವರನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಕಣ್ಣೂರಿನ ಜುಬೈರ್ ಹಮ್ಮಬ್ಬ(52), ಪಡೀಲ್ ನ ದೀಪಕ್(32), ಬಜ್ಪೆಯ ಅಬ್ದುಲ್ ನಾಸೀರ್ (40) ಬಂಧಿತ ಆರೋಪಿಗಳು. ವಾಹನದಲ್ಲಿ ಹಣ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬರ್ಕೆ ಠಾಣೆ ಪೊಲೀಸರು ನಗರದ ಲಾಲ್ ಬಾಗ್ ಕಡೆಯಿಂದ ನೆಹರು ಅವೆನ್ಯೂ ರಸ್ತೆಯಲ್ಲಿ ಸಾಗುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ಅಮಾನ್ಯಗೊಂಡ 500 ಮತ್ತು 1000 ರೂಪಾಯಿ ಮುಖಬೆಲೆಯ 1,92,50,000 ಮೌಲ್ಯದ ನೋಟುಗಳು ಪತ್ತೆಯಾಗಿವೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಅಮಾನ್ಯ ನೋಟು ಮತ್ತು ನೋಟು ಸಾಗಿಸಲು ಬಳಸಿದ ಇನ್ನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿ ಅಕ್ರಮ ಲಾಭಕ್ಕಾಗಿ ಸಾಗಾಟ ಮಾಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.