12 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ…

39
firstsuddi

ರಾಮನಗರ: 65 ವರ್ಷದ ವ್ಯಕ್ತಿಯೋರ್ವ 12 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವಂತಹ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಾಕಲೇಟ್ ಕೊಡಿಸುವುದಾಗಿ ಹೇಳಿ ಬಟ್ಟೆ ಬಿಚ್ಚಿಸಿದ ಆರೋಪ ಮಾಡಲಾಗಿದೆ. ಮಾತನಾಡಲು ಬಾರದ ಕಾರಣ ಯಾರಿಗೆ ಹೇಳುತ್ತಾಳೆ ಎಂದು ಬಾಲಕಿಯನ್ನು ಮನೆಯ ಹಿತ್ತಲಿಗೆ ಕರೆದುಕೊಂಡು ಹೋಗಿ ಕೃತ್ಯ ಎಸಗಲಾಗಿದೆ.

ಬಳಿಕ ಬಾಲಕಿಯ ತಾಯಿ ಮನೆಗೆ ವಾಪಾಸ್ ಆದಾಗ ಆಕೆ ಅಳುತ್ತಿದ್ದಳು. ಯಾಕೆ ಅಳುತ್ತಿದ್ದೀಯಾ ಎಂದು ಕೇಳಿದಾಗ, ಅಳುತ್ತಲೇ ತನ್ನ ಗುಪ್ತಾಂಗ ತೋರಿಸಿದ್ದಾಳೆ. ಯಾರು ಮಾಡಿದ್ದು ಅಂತ ಕೇಳಿದಾಗ ಸನ್ನೆ ಮಾಡಿ ವೃದ್ಧನ ಬಗ್ಗೆ ಬಾಲಕಿ ಹೇಳಿದ್ದಾಳೆ. ಕೂಡಲೇ ವೃದ್ಧನನ್ನು ಹಿಡಿದ ಸ್ಥಳೀಯರು ಧರ್ಮದೇಟು ನೀಡಿದ್ದಾರೆ.

ಬಳಿಕ ವೃದ್ಧ ತಾನೇ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸರ್ಕಾರಿ ಆಸ್ಪತ್ರೆ ಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿದ್ದು, ಪೋಕ್ಸೊ ಕಾಯ್ದೆಯಡಿ ವೃದ್ಧನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.