13 ಹೊಸ ಜಿಲ್ಲೆಗಳ ರಚನೆಗೆ ಆಂಧ್ರಪ್ರದೇಶ ಸರ್ಕಾರ ಅನುಮತಿ…

71
firstsuddi

ಅಮರಾವತಿ : ಆಂಧ್ರಪ್ರದೇಶ ಸರ್ಕಾರ 13 ಹೊಸ ಜಿಲ್ಲೆಗಳ ರಚನೆಗೆ ಅಧಿಸೂಚನೆಯನ್ನು ಹೊರಡಿಸಿದೆ. ಆಡಳಿತವನ್ನು ಸರಾಗಗೊಳಿಸಲು ಮತ್ತು ಅಧಿಕಾರಿಗಳ ಪ್ರವೇಶವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ನಿನ್ನೆ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದ ಆಂಧ್ರ ಸರ್ಕಾರ 13 ಹೊಸ ಜಿಲ್ಲೆಗಳ ರಚನೆಗೆ ಒಪ್ಪಿಗೆ ನೀಡಿದ್ದು, ಮುಂದಿನ ಯುಗಾದಿ ಹಬ್ಬದ ವೇಳೆಗೆ ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಬೇಕೆಂದು ಗುರಿ ಹೊಂದಿದೆ. ವಿಶಾಖಪಟ್ಟಣದ ಅರಕು ಲೋಕಸಭಾ ಕ್ಷೇತ್ರ ಸೇರಿದಂತೆ 24 ಲೋಕಸಭಾ ಕ್ಷೇತ್ರಗಳನ್ನು ಜಿಲ್ಲೆಗಳಾಗಿ ಪರಿವರ್ತಿಸಲಾಗುತ್ತಿದ್ದು, ಎರಡು ಜಿಲ್ಲೆಗಳಾಗಿ ವಿಂಗಡಣೆಯಾಗಲಿದೆ. ಪ್ರಸ್ತುತ ಆಂಧ್ರಪ್ರದೇಶದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

ಹೊಸ ಜಿಲ್ಲೆಗಳಲ್ಲಿ ಮಾನ್ಯಂ ಜಿಲ್ಲೆ, ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ, ಅನಕಾಪಲ್ಲಿ, ಕಾಕಿನಾಡ, ಕೋನ ಸೀಮಾ, ಏಲೂರು, ಎನ್ ಟಿಆರ್ ಜಿಲ್ಲೆ, ಬಾಪಾಟಿಯಾ, ಪಲ್ನಾಡು, ನಂದ್ಯಾಲ್, ಶ್ರೀ ಸತ್ಯಸಾಯಿ ಜಿಲ್ಲೆ, ಅನ್ನಮಯ್ಯ ಜಿಲ್ಲೆ, ಶ್ರೀ ಬಾಲಾಜಿ ಜಿಲ್ಲೆ ಸೇರಿವೆ.