ಮಂಗಳೂರು : ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಘಟ್ಟದ ಭಾಗದಿಂದ ನೀರು ಹರಿದು ಬರುವುದರಿಂದ ನೇತ್ರಾವತಿಯಲ್ಲಿ ನೀರು ಹೆಚ್ಚಿರುತ್ತದೆ. ಆದರೆ ಘಟ್ಟದ ಭಾಗದಲ್ಲಿ ಮಳೆಯಾಗದ ಕಾರಣ ನೇತ್ರಾವತಿಯಲ್ಲಿ ನೀರಿಲ್ಲ. ಕಿಂಡಿ ಅಣೆಕಟ್ಟು ಕಟ್ಟಿದರಿಂದ ತೀರ್ಥ ಮತ್ತು ಅಭಿಷೇಕಕ್ಕೆ ನೀರಿದೆ. ಹವಾಮಾನ ಇಲಾಖೆಯವರು ಇನ್ನೂ 10ದಿನಗಳ ಕಾಲ ಮಳೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. 15 ದಿನ ಮಳೆಯಾಗದೆ ಇದ್ದರೆ ಮಂಜುನಾಥ ಸ್ವಾಮಿಗೆ ಅಭಿಷೇಕ ಮಾಡುವುದಕ್ಕೂ ನೀರಿಲ್ಲ. ಹೀಗಾಗಿ ಭಕ್ತಾಧಿಗಳು ಕ್ಷೇತ್ರ ದರ್ಶನ ಮಾಡುವುದನ್ನು ಮುಂದೂಡಬೇಕು ಎಂದು ವಿನಂತಿ ಮಾಡುತ್ತೇವೆ. ಕೃಷಿಗೆ ಹೆಚ್ಚಾಗಿ ನೀರು ಬೇಕಾಗಿದ್ದು, ಪ್ರಕೃತಿ ಮತ್ತು ಜನಜೀವನದ ಮಧ್ಯೆ ಪೈಪೋಟಿ ಹೆಚ್ಚಿದೆ. ಪಶ್ಚಿಮ ಘಟ್ಟದಲ್ಲಿರುವ ಅರಣ್ಯ ನಾಶದಿಂದಾಗಿ ನೀರಿನ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದರು.










