ಹುಬ್ಬಳ್ಳಿ : ಆಟವಾಡುತ್ತಿದ್ದ ವೇಳೆ ನಾಲೆಗೆ ಬಿದ್ದು 2 ವರ್ಷದ ಕಂದಮ್ಮ ಮೃತಪಟ್ಟಿರುವ ಮನಕಲುಕುವ ಘಟನೆ ಜಿಲ್ಲೆಯ ಪ್ರಿಯದರ್ಶಿನಿ ಕಾಲೋನಿ ಬಳಿ ನಡೆದಿದೆ. ಶ್ರೀಜಿತ್ ನವಲೇಕರ್(2) ಮೃತ ಮಗು ಎಂದು ಗುರುತಿಸಲಾಗಿದೆ. ಮೃತ ಮಗು ತಾಯಿಯೊಂದಿಗೆ ಊಟ ಮಾಡುತ್ತಾ ಆಟವಾಡುತ್ತಿತ್ತು. ಈ ವೇಳೆ ತಾಯಿ ಊಟ ಖಾಲಿಯಾಗಿದೆ ಎಂದು ಊಟ ತರಲು ಮನೆ ಒಳಗೆ ತೆರಳಿದಾಗ ಆಟವಾಡುತ್ತಿದ್ದ ಮಗು ನಾಲೆಗೆ ಬಿದ್ದು ಮೃತಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ಶೋಧಕಾರ್ಯ ನಡೆಸಿ ಮಗುವಿನ ಮೃತದೇಹವನ್ನು ಪತ್ತೆ ಮಾಡಿದ್ದು, ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










