ಭಾರತೀಯ ವಾಯುಪಡೆಗೆ ರಫೇಲ್ ಯುದ್ಧ ವಿಮಾನ ಅಧಿಕೃತ ಸೇರ್ಪಡೆ…

139
firstsuddi

ಚಂಡೀಘಡ : ಭಾರತೀಯ ವಾಯುಪಡೆಗೆ ಮತ್ತಷ್ಟು ಬಲ ತುಂಬಲು ರಫೇಲ್ ಯುದ್ಧವಿಮಾನಗಳು ಇಂದು ಭಾರತೀಯ ವಾಯಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಿವೆ. ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ರಫೇಲ್ ಯುದ್ಧ ವಿಮಾನ ಸೇರ್ಪಡೆಗೆ ಸರಳವಾಗಿ ಕಾರ್ಯಕ್ರಮವನ್ನು ಆಯೋಜಿಸಿ ವಾಯುಪಡೆಗೆ ರಪೇಲ್ ಯುದ್ಧ ವಿಮಾನವನ್ನು ಬರಮಾಡಿಕೊಳ್ಳಲಾಯಿತು. ಯುದ್ಧ ವಿಮಾನವನ್ನು ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳುವ ಮುನ್ನ ದೇಶದ ಸರ್ವ ಧರ್ಮ ಧರ್ಮಗುರುಗಳು ಪೂಜೆಯನ್ನು ನೆರವೇರಿಸಿದರು. ಪೂಜೆಯ ಬಳಿಕ ರಫೇಲ್ ಯುದ್ಧ ವಿಮಾನ ಹಾಗೂ ಸುಖೋಯ್ 30 ಯುದ್ಧ ವಿಮಾನಗಳು ವೈಮಾನಿಕ ಪ್ರದರ್ಶನ ನಡೆಸಿದವು. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಹಾಗೂ ಫ್ರಾನ್ಸ್ ನ ರಕ್ಷಣಾ ಸಚಿವೆ ಫ್ಲಾರೆನ್ ಪಾರ್ಲೆ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.