20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್-ಮೀನುಗಾರಿಕೆಗೆ 20 ಸಾವಿರ ಕೋಟಿ ಮೀಸಲು : ನಿರ್ಮಲಾ ಸೀತಾರಾಮನ್.

142
firstsuddi

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರೂ ಆರ್ಥಿಕ ಪ್ಯಾಕೇಜ್ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮೂರನೇ ಹಂತದಲ್ಲಿ ವಿವರಣೆ ನೀಡಿದ್ದಾರೆ. ಇಂದು ಉಳಿದ ಭಾಗದಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಹಣ ನೀಡಲಾಗುವುದು ಎಂಬುವುದರ ಕುರಿತು ಸುದ್ಧಿಗೋಷ್ಠಿಯಲ್ಲಿ ವಿವರಣೆ ನೀಡಿದ್ದಾರೆ.
ಪಶುಸಂಗೋಪನೆ ಮೂಲ ಸೌಕರ್ಯ ಅಭಿವೃದ್ಧಿಗಾಗಿ 15 ಸಾವಿರ ಕೋಟಿ ರೂ. ನೆರವು. ಎಲ್ಲಾ ಪಶುಗಳಿಗೆ ಶೇ. 100 ರಷ್ಟು ರೋಗ ನಿರೋಧಕ ಲಸಿಕೆ ನೀಡಲಾಗುವುದು. ಈಗಾಲೇ 1.5 ಕೋಟಿ ಹಸು ಮತ್ತು ಎಮ್ಮೆಗಳಿಗೆ ರೋಗ ನಿರೋಧಕ ಲಸಿಕೆಯನ್ನು ನೀಡಲಾಗಿದೆ. ಒಟ್ಟಾರೆಯಾಗಿ 53 ಕೋಟಿ ಜಾನುವಾರುಗಳಿಗೆ ಲಸಿಕೆ ನೀಡಲಾಗುವುದು. ಲಸಿಕೆ ಹಾಕುವುದಕ್ಕಾಗಿ 13,343 ಕೋಟಿ ನೀಡಲಾಗುವುದು. 15.000 ಕೋಟಿ ರೂ. ಹೈನುಗಾರಿಕೆ ಮೂಲಸೌಕರ್ಯಕ್ಕೆ ಮೀಸಲು.
ಕೃಷಿಯಲ್ಲಿ ಆಡಳಿತಾತ್ಮಕ ಸುಧಾರಣೆಗಳ ಕುರಿತು ಪ್ರಸ್ತಾಪ ಮಾಡಲಾಗಿದ್ದು, ಮೂಲಸೌಕರ್ಯ, ಸಾಮಥ್ರ್ಯ ವೃದ್ಧಿ ಬಗ್ಗೆ 8 ನಿರ್ಧಾರಗಳು ಹಾಗೂ ಸರ್ಕಾರ, ಆಡಳಿತಾತ್ಮಕ ಸುಧಾರಣೆಗಳ ಕುರಿತು 3 ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ಕಾಯ್ದೆ ಎಣ್ಣೆ ಕಾಳುಗಳು, ಬೇಳೆ ಕಾಳುಗಳು, ಆಲೂಗಡ್ಡೆ, ಈರುಳ್ಳಿ ನಿರ್ಧಿಷ್ಟ ಸಂಗ್ರಹದ ಮೇಲಿನ ನಿಷೇಧ ರದ್ದು. 500 ಕೋಟಿ ರೂ. ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ ಸಾಗಣೆ, ಸಂಗ್ರಹಣೆಗೆ ಮೀಸಲು.
ಮತ್ಸ್ಯ ಸಂಪದ ಯೋಜನೆಯ ಮೂಲಕ ಮೀನುಗಾರಿಕೆ ಹೆಚ್ಚು ಒತ್ತು ನೀಡಲಾಗಿದ್ದು, ಮೀನು ಸಾಕಾಣೆ, ಮೀನುಗಾರರಿಗೆ ಹೊಸ ಉಪಕರಣಗಳ ಖರೀದಿಗಾಗಿ 20 ಸಾವಿರ ಕೋಟಿ ರೂ. ಮೀಸಲು. ಮೀನುಗಾರಿಕೆಯಲ್ಲಿ ಸುಮಾರು 55 ಲಕ್ಷ ಉದ್ಯೋಗ ಸೃಷ್ಠಿಯ ಗುರಿ ಹೊಂದಲಾಗಿದೆ.
ಸಾವಯವ ಕೃಷಿ, ಹಾಗೂ ಹರ್ಬಲ್ ಕೃಷಿಕರಿಗೆ ನೆರವು ನೀಡಲಾಗುತ್ತದೆ. ವನ್ಯ ಸಂಪತ್ತು ಯೋಜನೆಗೂ ಹಣ ನೀಡಲಾಗುವುದು ಎಂದು ತಿಳಿಸಿದರು.
ಹಾಗೆಯೇ ಕರ್ನಾಟಕದಲ್ಲಿ ರಾಗಿ ಬೆಳೆಯ ಬಗ್ಗೆ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್ ಅವರು, ಸಾವಯವ ಪದ್ದತಿ ಮೂಲಕ ರಾಗಿ ಬೆಳೆಯಲು ಪ್ರೋತ್ಸಾಹ ನೀಡಲಾಗುವುದು ಎಂದರು.
ಕೃಷಿ ಮೂಲ ಸೌಕರ್ಯ ವೃದ್ಧಿಗಾಗಿ 1 ಲಕ್ಷ ಕೋಟಿ ರೂ. ಮೂಲ ಸೌಕರ್ಯ ವೃದ್ಧಿಗಾಗಿ 1 ಲಕ್ಷ ಕೋಟಿ. ಕೃಷಿ ಉತ್ಪಾದಕ ಸಂಘಗಳು ಸೇರಿ ಕ್ಲಸ್ಟರ್ ಆಧಾರಿತ ಕೃಷಿಗೆ 10 ಸಾವಿರ ಕೋಟಿ ರೂ. ಹಾಗೂ ಕೃಷಿ ಉತ್ಪನ್ನಗಳ ಸಾಗಾಟಕ್ಕೆ 10 ಸಾವಿರ ಕೋಟಿ ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ.
ಜೇನು ಸಾಕಾಣಿಕೆಗೆ 500 ಕೋಟಿ ರೂ. ಮೀಸಲಿಡಲಾಗಿದ್ದು, ಜೇನಿನಿಂದ ಉತ್ಪತ್ತಿಯಾಗುವ ಮೇಣದ ರಫ್ತು ಕಡಿಮೆ ಮಾಡಲು ಸರ್ಕಾರದ ಯತ್ನ. ಈ ಮೂಲಕ ಮಹಿಳೆಯರಿಗೆ ಜೇನಿನ ಮೇಣದಿಂದ ಉದ್ಯೋಗ ಮತ್ತು ಆದಾಯ ಹೆಚ್ಚಳಕ್ಕೆ ಒತ್ತು.
ಔಷಧೀಯ ಸಸ್ಯಗಳ ಮಾರಾಟದಿಂದ 5 ಸಾವಿರ ಕೋಟಿ ರೂ. ಆದಾಯದ ನಿರೀಕ್ಷೆ. ಔಷಧೀಯ ಸಸ್ಯಗಳ ಕೃಷಿ ಉತ್ತೇಜನಕ್ಕೆ 4 ಸಾವಿರ ಕೊಟಿ ರೂ. ಮೀಸಲು.