2021ರ ಐಪಿಎಲ್ ಗೆ ಬಿಸಿಸಿಐ ಸಿದ್ಧತೆ-ಟೂರ್ನಿಗೆ ಹೊಸ ತಂಡ ಸೇರ್ಪಡೆ…

202
firstsuddi

ಮುಂಬೈ : ಐಪಿಲ್-2020 ರ ಪಂದ್ಯಾವಳಿ ಮುಗಿಯುತ್ತಿದ್ದಂತೆ ಬಿಸಿಸಿಐ ಐಪಿಎಲ್-2021ರ ಆವೃತ್ತಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಟೂರ್ನಿಗೆ ಹೊಸ ತಂಡ ಸೇರ್ಪಡೆಯಾಗಲಿದೆ. ಈ ಬಾರಿ ಭಾರತದಲ್ಲಿ ಮಹಾಮಾರಿ ಕೊರೊನಾ ವೈರಸ್ ಭೀತಿ ಹೆಚ್ಚಿದ್ದ ಹಿನ್ನೆಲೆ, 2020ರ ಐಪಿಎಲ್ ಪಂದ್ಯವನ್ನು ಅಬುಧಾಬಿಯಲ್ಲಿ ನಡೆಸಲಾಗಿತ್ತು. ಆದರೆ ಮುಂಬರುವ ಐಪಿಎಲ್-2021ರ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಬಿಸಿಸಿಐ ಸಿದ್ಧವಾಗುತ್ತಿದೆ. ಅಲ್ಲದೇ 2021ರ ಆವೃತ್ತಿಗೆ ಹೊಸ ತಂಡವೊಂದು ಸೇರಿಕೊಳ್ಳಲಿದ್ದು, ಮುಂದಿನ ವರ್ಷ ಅಹ್ಮದಾಬಾದ್ ತಂಡ 9ನೇ ತಂಡವಾಗಿ ಕಣಕ್ಕಿಳಿಯಲಿದ್ದು, ಹರಾಜು ಪ್ರಕ್ರಿಯೆಗೆ ಬಿಸಿಸಿಐ ಸಿದ್ಧವಾಗುತ್ತಿದೆ ಎಂದು ತಿಳಿದು ಬಂದಿದೆ.