2023ರ ವೇಳೆಗೆ ಜನಸಂಖ್ಯೆಯಲ್ಲಿ ಚೀನಾವನ್ನೇ ಮೀರಿಸಲಿದೆ ಭಾರತ!

85
firstsuddi

ನ್ಯೂಯಾರ್ಕ್ : 2023 ಅಥವಾ 2022ರ ನವೆಂಬರ್ ಮಧ್ಯದ ವೇಳೆಗೆ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿದ್ದು, 8 ಶತಕೋಟಿಗೆ ತಲುಪುವ ಮುನ್ಸೂಚನೆ ಇದೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ತಿಳಿಸಿದೆ.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗ, ಜನಸಂಖ್ಯಾ ವಿಭಾಗಗಳ ವತಿಯಿಂದ ತಯಾರಿಸಲಾದ ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022 ಪ್ರಕಾರ, ಜಾಗತಿಕ ಜನಸಂಖ್ಯೆಯು ನವೆಂಬರ್ 15, 2022 ರಂದು ಎಂಟು ಬಿಲಿಯನ್ ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ ಜನಸಂಖ್ಯೆಯು 1950 ರಿಂದ ಅದರ ನಿಧಾನಗತಿಯ ದರದಲ್ಲಿ ಬೆಳೆಯುತ್ತಿದೆ. ವಿಶ್ವಸಂಸ್ಥೆಯ ಇತ್ತೀಚಿನ ಅಂದಾಜುಗಳ ಪ್ರಕಾರ ವಿಶ್ವದ ಜನಸಂಖ್ಯೆಯು 2030 ರಲ್ಲಿ ಸುಮಾರು 8.5 ಶತಕೋಟಿ ಮತ್ತು 2050 ರಲ್ಲಿ 9.7 ಶತಕೋಟಿಗೆ ಬೆಳೆಯಬಹುದು. ಇದು 2080 ರ ದಶಕದಲ್ಲಿ ಸುಮಾರು 10.4 ಶತಕೋಟಿಗೆ ಬೆಳೆಯುತ್ತದೆ ಮತ್ತು 2100 ರವರೆಗೆ ಅದೇ ಮಟ್ಟದಲ್ಲಿ ಉಳಿಯುತ್ತದೆ ಎಂದು ಅಂದಾಜಿಸಲಾಗಿದೆ.