ನವದೆಹಲಿ : ಮುಂಬೈ ದಾಳಿಗೆ 14 ವರ್ಷ ಕಳೆದಿದ್ದು. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ದಾಳಿಯಲ್ಲಿ ಮಡಿದವರನ್ನು ಸ್ಮರಿಸಿದ್ದಾರೆ.
ಭಯೋತ್ಪಾದನೆಯು ಮನುಕುಲಕ್ಕೆ ಧಕ್ಕೆ ತಂದಿದೆ. 26/11 ರಂದು ಮಡಿದವರ ಸ್ಮರಿಸುವಲ್ಲಿ ಇಡೀ ಜಗತ್ತು ಭಾರತದೊಂದಿಗೆ ಕೈಜೋಡಿಸುತ್ತಿದೆ. ಈ ದಾಳಿಯನ್ನು ಯೋಜಿಸಿದ ಮತ್ತು ಮೇಲ್ವಿಚಾರಣೆ ಮಾಡಿದವರನ್ನು ನ್ಯಾಯದ ಮುಂದೆ ತರಬೇಕು. ನಾವು ಭಯೋತ್ಪಾದನೆಯ ಪ್ರತಿಯೊಬ್ಬ ಸಂತ್ರಸ್ತನಿಗೂ ಋಣಿಯಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
2008 ನವೆಂಬರ್ 26 ಮುಂಬೈ ನಗರದ ಮೇಲೆ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕರು ಬಂದೂಕು ಮತ್ತು ಬಾಂಬಿನ ಮೂಲಕ ದಾಳಿ ನಡೆಸಿದ್ದರು. ಈ ದುರ್ಘಟನೆಯಲ್ಲಿ ಆರು ಜನ ಅಮೆರಿಕಾದ ನಾಗರಿಕರು, ಹಲವು ವಿದೇಶಿಯರೂ ಸೇರಿದಂತೆ 174 ಜನರು ಸಾವಿಗೀಡಾಗಿದ್ದರು. 300ಕ್ಕೂ ಅಧಿಕ ಜನರು ಗಾಯಾಳುಗಳಾಗಿದ್ದರು. ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯ ಆಗಿತ್ತು. ಇಂದಿಗೆ ಆ ಘಟನೆ ನಡೆದು 14 ವರ್ಷಗಳು ಕಳೆದಿವೆ.










